ಪುತ್ತೂರು, ಜನವರಿ 23, 2026 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳವು ಜನವರಿ 24 ರಿಂದ ಪ್ರಾರಂಭಗೊಂಡು 25 ರವರೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಹಾಗೂ ಪುತ್ತೂರು ನಗರ ಠಾಣಾ ಸರಹದ್ದು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ, ಪುತ್ತೂರು ನಗರ ಠಾಣೆಯಲ್ಲಿ ಜನ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವುದಾಗಿ ಹಾಗೂ ಕಂಬಳ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿಕೊಂಡು ಕಿರುಕುಳ ಉಂಟುಮಾಡುವುದನ್ನು ತಪ್ಪಿಸಲು ಪುತ್ತೂರು ನಗರದಲ್ಲಿರುವ ಎಲ್ಲಾ ಬಾರ್ ಮತ್ತು ವೈನ್‍ಶಾಪ್, ಮದ್ಯ ಅಂಗಡಿಗಳನ್ನು ಜನವರಿ 24 ರಂದು ಬೆಳಿಗ್ಗೆ 6 ಗಂಟೆಯಿಂದ 25 ರ ರಾತ್ರಿ 12 ಗಂಟೆಯವರೆಗೆ ಮುಚ್ಚಲು ಹಾಗೂ ಅಮಲು ಪದಾರ್ಥಗಳನ್ನು ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ.
23 January 2026
- Blogger Comments
- Facebook Comments
Subscribe to:
Post Comments (Atom)












0 comments:
Post a Comment