ಬಂಟ್ವಾಳ : ಸಿಪಿಐ(ಎಂ) ಹಿರಿಯ ಮುಖಂಡ ಸಂಜೀವ ಬಂಗೇರ ಅವರಿಗೆ ನುಡಿನಮನ ಕಾರ್ಯಕ್ರಮ
ಬಂಟ್ವಾಳ, ಜನವರಿ 27, 2026 (ಕರಾವಳಿ ಟೈಮ್ಸ್) : ಕಾರ್ಮಿಕ ಮುಖಂಡ ದಿವಂಗತ ಸಂಜೀವ ಬಂಗೇರ ಅವರು ಸರಳ-ಸಜ್ಜನಿಕೆಯ ವ್ಯಕ್ತಿತ್ವ ಮೈಗೂಡಿಸಿಕೊಂಡು ಯಾರ ಬಗ್ಗೆಯೂ ಅನ್ಯಥಾ ಭಾವಿಸದೆ ಎಲ್ಲರೊಂದಿಗೂ ಮೃದುವಾಗಿ ಪ್ರೀತಿ-ಸೌಜನ್ಯದಿಂದ ಜೀವನದುದ್ದಕ್ಕೂ ಬದುಕಿದವರು. ಆದರೆ ಕಾರ್ಮಿಕರ ಪರ ಹೋರಾಟದಲ್ಲಿ ಅವರು ಎಂದಿಗೂ ಯರೊಂದಿಗೂ ರಾಜಿ ಮಾಡಿಕೊಂಡವರಲ್ಲ. ರಾಜಿ ರಹಿತ ಹೋರಾಟದ ಮೂಲಕ ಕಾರ್ಮಿಕ ಸಮೂಹಕ್ಕೆ ಆನೆ ಬಲ ತುಂಬಿದವರು ದಿವಂಗತ ಸಂಜೀವ ಬಂಗೇರರು. ಅಂತಹ ನಾಯಕರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲ ಇಡೀ ನಾಗರಿಕ ಸಮಾಜಕ್ಕೆ, ದುಡಿಯುವ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಹೇಳಿದರು.
ಜನವರಿ 26 ರಂದು ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರಲ್ಲಿ ನಡೆದ ಜನವರಿ 13 ರಂದು ರಾತ್ರಿ ನಿಧನರಾದ ಜಕ್ರಿಬೆಟ್ಟು ನಿವಾಸಿ, ಸಿಪಿಐ (ಎಂ) ಪಕ್ಷದ ಹಿರಿಯ ಧುರೀಣ ಬಂಟ್ವಾಳ ಸಂಜೀವ ಬಂಗೇರ ಅವರ ಉತ್ತರ ಕ್ರಿಯೆ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಸಿಪಿಐ(ಎಂ) ಪಕ್ಷದ ಪರವಾಗಿ ಬಾಲಕೃಷ್ಣ ಶೆಟ್ಟಿ ಅವರು ನುಡಿನಮ ಸಲ್ಲಿಸಿದರು. ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ ಎಂ ಪಿ ಶ್ರೀನಾಥ್, ಕಡಬ ಘಟಕಾಧ್ಯಕ್ಷ ಸೇಸಪ್ಪ ರೈ, ಸವಿತಾ ಸಮಾಜ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಉಡುಪಿ ಪರಿಯಾಳ ಸಮಾಜದ ಜಿಲ್ಲಾಧ್ಯಕ್ಷ ಶಂಕರ ಸಾತಿಯಾನ್ ಕಟಪಾಡಿ, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ವಾಸು ಪೂಜಾರಿ ಲೊರೆಟ್ಟೊ, ಬಿ ಎಂ ಅಬ್ಬಾಸ್ ಅಲಿ, ಬಿ ಎಂ ಭಟ್, ಸದಾಶಿವ ಬಂಗೇರ, ಮುನೀರ್ ಕಾಟಿಪಳ್ಳ, ಹರಿಕೃಷ್ಣ ಬಂಟ್ವಾಳ, ಸಂಜೀವ ಪೂಜಾರಿ ಬೊಳ್ಳಾಯಿ, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ವಸಂತ ಆಚಾರಿ, ಬೇಬಿ ಕುಂದರ್, ದೇವಪ್ಪ ಪೂಜಾರಿ ಬಾಳಿಕೆ, ರಾಮದಾಸ್ ಬಂಟ್ಟಾಳ, ಪದ್ಮನಾಭ ರೈ, ಅಶ್ವನಿ ಕುಮಾರ್ ರೈ, ಶೇಖರ್ ಬಿ, ಬಾಬು ಭಂಡಾರಿ, ರಝಾಕ್ ಕುಕ್ಕಾಜೆ, ಸುರೇಶ ನಂದೊಟ್ಟು, ಸದಾಶಿವ ಕುರ್ಕಾಲು, ರಾಮಕೃಷ್ಣ ಶೆಟ್ಟಿ ಮೂಡಿಗೆರೆ, ದುರ್ಗಾದಾಸ್ ಶೆಟ್ಟಿ, ನಾರಾಯಣ ಮೈಸೂರು ಸಹಿತ ಹಲವು ಮಂದಿ ಗಣ್ಯರು, ಮೃತರ ಪುತ್ರರಾದ ವಿಶ್ವನಾಥ ಬಂಟ್ವಾಳ, ಪ್ರವೀಣ್ ಜಕ್ರಿಬೆಟ್ಟು ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಸಾರ್ವಜನಿಕರು ಭಾಗವಹಿಸಿ ಮೃತರಿಗೆ ನಮನ ಸಲ್ಲಿಸಿದರು. ದಿನೇಶ್ ಎಲ್ ಬಂಗೇರ ಸ್ವಾಗತಿಸಿ. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.



























0 comments:
Post a Comment