ಉಡುಪಿ, ಜನವರಿ 26, 2026 (ಕರಾವಳಿ ಟೈಮ್ಸ್) : ಜಿಲ್ಲೆಯ ಮಣಿಪುರ-ಕಟಪಾಡಿಯ ರಹ್ಮಾನಿಯಾ ಜುಮಾ ಮಸೀದಿ ಅಧೀನದಲ್ಲಿರುವ ಖಲಂದರ್ ಷಾ ದಫ್ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಮಸೀದಿ ವಠಾರದಲ್ಲಿ ಜನವರಿ 24 ರಂದು ನಡೆದ ದಫ್ ಸ್ಪರ್ಧೆಯಲ್ಲಿ ಎ ವಿಭಾಗದಲ್ಲಿ ದೇರಳಕಟ್ಟೆ-ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ಹಾಗೂ ಬಿ ವಿಭಾಗದಲ್ಲಿ ಶಂಸುಲ್ ಹುದಾ ದಫ್ ತಂಡ ಬರುವಾ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಎ ವಿಭಾಗದಲ್ಲಿ ಉಳ್ಳಾಲ-ಅಕ್ಕರೆಕರೆ ಅಲ್-ಜಝೀರಾ ದಫ್ ತಂಡ ದ್ವಿತೀಯ ಹಾಗೂ ಕನ್ನಂಗಾರ್ ಇಶಾಅತಿಸ್ಸುನ್ನ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಮಜೂರು ಸಿರಾಜುಲ್ ಹುದಾ ದಫ್ ತಂಡ ಅತ್ಯುತ್ತಮ ತಟ್ಟುವ ಶೈಲಿ ಹಾಗೂ ಶಿರ್ವ ಅಲ್-ಅಮೀನ್ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಿ ವಿಭಾಗದಲ್ಲಿ ಮಂಜನಾಡಿಯ ರಿಫಾಯಿಯ ಖಿದ್ಮತುಲ್ ಇಸ್ಲಾಂ ದಫ್ ತಂಡ ದ್ವಿತೀಯ ಹಾಗೂ ಹರೇಕಳ ಬದ್ರಿಯಾ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ನೇರಳಕಟ್ಟೆ ರಹ್ಮಾ£ಯಾ ದಫ್ ತಂಡ ಅತ್ಯುತ್ತಮ ತಟ್ಟುವ ಶೈಲಿ ಹಾಗೂ ಕುಂದಾಪುರ ಖುವ್ವತುಲ್ ಇಸ್ಲಾಂ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮಣಿಪುರ ಮಸೀದಿ ಅಧ್ಯಕ್ಷ ರಫೀಕ್ ಕೆ ಶಾಬಾನ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಹಾಜಿ ಉಮರ್ ಕುಂಞ ಬದವಿ ಉದ್ಘಾಟಿಸಿದರು. ಕಟಪಾಡಿ ಜಾಮಿಯಾ ಮಸೀದಿ ಖತೀಬ್ ಹಾಜಿ ಬಶೀರ್ ಮದನಿ ದುವಾಶೀರ್ವಚನಗೈದರು.
ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಉಡುಪಿ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಮದ್ರಸ ಅಧ್ಯಾಪಕರಾದ ಮುಹಮ್ಮದ್ ಅಶ್ರಫ್ ಮುಸ್ಲಿಯಾರ್, ಸಫ್ವಾನ್ ಸಅದಿ, ಅಬ್ದುಲ್ ಅಝೀಝ್ ಫಾಳಿಲಿ, ದಫ್ ಉಸ್ತಾದ್ ಹಂಝ ಇರಾ ಮೂಲೆ, ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶಮೀರ್, ಉಪಾಧ್ಯಕ್ಷ ಅಬ್ದುಲ್ ರಶೀದ್ ಅಬ್ಬಾಸ್, ಕೋಶಾಧಿಕಾರಿ ಹಂಝ ಗಾಡಿ, ಪ್ರಮುಖರಾದ ಮುಹಮ್ಮದ್ ಸಲೀಂ ದೇವಳಗುಜ್ಜಿ, ಅಬ್ದುಲ್ ರಶೀದ್ ಅಝೀಝ್, ಸೈಫುಲ್ಲಾ ಉಸ್ಮಾನ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು.
ಹಾಜಿ ಹಂಝ ಉಸ್ತಾದ್ ಇರಾಮೂಲೆ, ನಿಝಾಮುದ್ದೀನ್, ನೌಶೀರ್ ಬಜಾಲ್ ತೀರ್ಪುಗಾರರಾಗಿ ಸಹಕರಿಸಿದರು. ಇದೇ ವೇಳೆ ಮಣಿಪುರ ಖಲಂದರ್ ಷಾ ದಫ್ ತಂಡದ ಎಲ್ಲಾ ಸದಸ್ಯರುಗಳನ್ನು ಹಾಗೂ ದಫ್ ಕಲಾ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡ ಹಲವು ಮಂದಿಯನ್ನು ಮತ್ತು ಹಲವು ಪ್ರಮುಖರನ್ನು ಗುರುತಿಸಿ ಗೌರವಿಸಲಾಯಿತು.
ಸಫ್ವಾನ್ ಸಅದಿ ಸ್ವಾಗತಿಸಿ, ನೌಫಲ್ ವಂದಿಸಿದರು. ದಫ್ ಎಸೋಸಿಯೇಶನ್ ಪದಾಧಿಕಾರಿಗಳಾದ ಅಬ್ದುಲ್ ಹಮೀದ್ ಗೋಳ್ತಮಜಲು ಹಾಗೂ ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು 2 ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಬೃಹತ್ ಜಲಾಲಿಯ್ಯಾ ದ್ಸಿಕ್ರ್ ಮಜ್ಲಿಸ್ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಕೂರತ್ ತಂಙಳ್, ಪೆÇೀಸೋಟು ತಂಙಳ್, ಬೇಕಲ್ ಉಸ್ತಾದ್, ಕೂರತ್ ತಂಙಳ್ ಹಾಗೂ ಅಗಲಿದ ಇನ್ನಿತರ ಉಲಮಾ-ಉಮರಾಗಳ ಅನುಸ್ಮರಣಾ ಮಜ್ಲಿಸ್, ವಾರ್ಷಿಕ ಝಿಕ್ರ್ ಮಜ್ಲಿಸ್, ಮತ ಪ್ರಭಾಷಣ ಕಾರ್ಯಕ್ರಮಗಳು ನಡೆಯಿತು.













































0 comments:
Post a Comment