ಮಂಗಳೂರು, ಜನವರಿ 11, 2026 (ಕರಾವಳಿ ಟೈಮ್ಸ್) : ಫ್ರೆಂಡ್ಸ್ ಗ್ರೂಪ್ ಕೈಕಂಬ-ಬಿ.ಸಿ.ರೋಡು ಇದರ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಈಸಾ ಎಂಟರ್ ಪ್ರೈಸಸ್ ಹಾಗೂ ಎಸ್ ಆರ್ ಎಂಟರ್ ಪ್ರೈಸಸ್ ಇವುಗಳ ಪ್ರಾಯೋಜಕತ್ವದಲ್ಲಿ 18 ತಂಡಗಳ 6 ಓವರುಗಳ 11 ಜನರ “ಬಂಟ್ವಾಳ ಟ್ರೋಫಿ-2026” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 11 ಬುಧವಾರ ಹಾಗೂ ಫೆಬ್ರವರಿ 12 ರಂದು ಗುರುವಾರ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಕೂಟದಲ್ಲಿ ಚಾಂಪಿಯನ್ ತಂಡಕ್ಕೆ ಪ್ರಥಮ 90,000/- ರೂಪಾಯಿ ನಗದು ಹಾಗೂ ಬಂಟ್ವಾಳ ಟ್ರೋಫಿ ಮತ್ತು ರನ್ನರ್ಸ್ ತಂಡಕ್ಕೆ 45,000/- ರೂಪಾಯಿ ನಗದು ಹಾಗೂ ಬಂಟ್ವಾಳ ಟ್ರೋಫಿ ಅಲ್ಲದೆ ಪ್ರತಿ ಪಂದ್ಯಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ, ಉತ್ತಮ ದಾಂಡಿಗ, ಎಸೆತಗಾರ ಹಾಗೂ ಸರಣಿ ಶ್ರೇಷ್ಠ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಭಾಗವಹಿಸುವ ತಂಡಗಳಿಗೆ 9,000/- ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈ ಕೂಟದಲ್ಲಿ ವಿಜೇತ ಚಾಂಪಿಯನ್ ತಂಡಕ್ಕೆ ಮುಂದಿನ ಬಾರಿ ನಡೆಯುವ ಕೂಟದಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ 9972246234 (ಆದಂ ಅದ್ದೇಡಿ) ಹಾಗೂ 9901564837 (ಹಬೀಬ್ ಗುಡ್ ಲುಕ್) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

















0 comments:
Post a Comment