ಬಂಟ್ವಾಳ, ಜನವರಿ 12, 2026 (ಕರಾವಳಿ ಟೈಮ್ಸ್) : ಶ್ರೀ ಪತಂಜಲಿ ಯೋಗ ಶಿಕ್ಷಣ (ರಿ) ಕರ್ನಾಟಕ ಇದರ ಮಂಗಳೂರು ನೇತ್ರಾವತಿ ವಲಯ ವತಿಯಿಂದ ಮಾತೃ ಧ್ಯಾನ, ಮಾತೃ ವಂದನಾ ಹಾಗೂ ಮಾತೃ ಭೋಜನ ಕಾರ್ಯಕ್ರಮ ವಗ್ಗ-ಕಾಡಬೆಟ್ಟು ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಜನವರಿ 11 ರಂದು ನಡೆಯಿತು.
ಜಿಲ್ಲಾ ಪ್ರಶಿಕ್ಷಣ ಚಿಂತನ ಕೂಟದ ಸಂಘಟನಾ ವಲಯದ ಪ್ರಾತ ಸಂಚಾಲಕ ಹರೀಶ್ ಕೋಟ್ಯಾನ್ ಪ್ರಸ್ತಾವಿಕ ಮಾತನಾಡಿದರು. ಮುರುಘೇಂದ್ರ ಪೂಂಜಾಲಕಟ್ಟೆಯ ಶಾಖೆಯ ಮಲ್ಲಿಕಾ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುಗುಣ ಶಾಂತರಾಮ್ ಪ್ರಭು ಅತಿಥಿಗಳಾಗಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ಯೋಗ ಬಂಧುಗಳಿಂದ ಮಾತೃ ಧಾನ್ಯ, ಮಾತೃ ವಂದನಾ, ಮಾತೃ ಭೋಜನ ಕಾರ್ಯಕ್ರಮ ನಡೆಯಿತು. ಕುಮಾರಿ ಯಶ್ವಿತಾ ಪ್ರಾರ್ಥನೆ ಮಾಡಿದರು. ಹೇಮಾ ಸ್ವಾಗತಿಸಿ, ರಾಜೇಶ್ವರಿ ವಂದಿಸಿದರು. ಉಷಾ ವರದಿ ವಾಚಿಸಿ, ರಮ್ಯ ಕಾರ್ಯಕ್ರಮ ನಿರೂಪಿಸಿದರು.












0 comments:
Post a Comment