ಬಂಟ್ವಾಳ, ಜನವರಿ 09, 2026 (ಕರಾವಳಿ ಟೈಮ್ಸ್) : ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ಡಿ 7 ರಂದು ಸಂಭವಿಸಿದೆ.
ಗಾಯಗೊಂಡ ಪಾದಚಾರಿಯನ್ನು ಪಿಲಾತಬೆಟ್ಟು ಗ್ರಾಮದ ನೈನಾಡ ನಿವಾಸಿ ಗ್ರೇಗರಿ ಉರ್ಬನ್ ಪಿಂಟೋ (64) ಎಂದು ಹೆಸರಿಸಲಾಗಿದೆ. ಇವರು ಜಕ್ರಿಬೆಟ್ಟು ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಬೆಳ್ತಂಗಡಿ ಕಡೆಯಿಂದ ಬಿ ಸಿ ರೋಡು ಕಡೆಗೆ ಅಬ್ದುಲ್ ಫತಾಹ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಗ್ರೇಗರಿ ಅರ್ಬನ್ ಪಿಂಟೋ ಅವರು ಎಸೆಯಲ್ಪಟ್ಟು ಕಾರಿನ ಎದುರಿನ ಗ್ಲಾಸ್ ಮೇಲೆ ಬಿದ್ದು ಬಳಿಕ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಪಡೀಲ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















0 comments:
Post a Comment