ಗಾಂಧೀಜಿ ಅವರನ್ನು ಒಪ್ಪಿಕೊಳ್ಳದ ಬಿಜೆಪಿಗರ ಕನಿಷ್ಠ ಮನೋಭಾವನೆಯ ಅನಾವರಣವೇ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ : ರಮಾನಾಥ ರೈ ವಾಗ್ದಾಳಿ - Karavali Times ಗಾಂಧೀಜಿ ಅವರನ್ನು ಒಪ್ಪಿಕೊಳ್ಳದ ಬಿಜೆಪಿಗರ ಕನಿಷ್ಠ ಮನೋಭಾವನೆಯ ಅನಾವರಣವೇ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ : ರಮಾನಾಥ ರೈ ವಾಗ್ದಾಳಿ - Karavali Times

728x90

28 January 2026

ಗಾಂಧೀಜಿ ಅವರನ್ನು ಒಪ್ಪಿಕೊಳ್ಳದ ಬಿಜೆಪಿಗರ ಕನಿಷ್ಠ ಮನೋಭಾವನೆಯ ಅನಾವರಣವೇ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ : ರಮಾನಾಥ ರೈ ವಾಗ್ದಾಳಿ

 ಬಂಟ್ವಾಳ ಕಾಂಗ್ರೆಸ್ ವತಿಯಿಂದ ನರೇಗಾ ಬಚಾವೋ ಸಂಗ್ರಾಮ್ ಪ್ರಯುಕ್ತ ಪಾದಯಾತ್ರೆ


ಬಂಟ್ವಾಳ, ಜನವರಿ 28, 2026 (ಕರಾವಳಿ ಟೈಮ್ಸ್) : ಜನರ ಹತ್ತಿರದ ಸರಕಾರವಾಗಿರುವ ಸ್ಥಳೀಯಾಡಳಿತದ ಸ್ವಾಯತ್ತತೆಯ ಪ್ರಶ್ನೆಯಾಗಿದ್ದು, ಇದನ್ನು ಕೇಂದ್ರ ಸರಕಾರ ತಕ್ಷಣ ವಾಪಾಸು ಪಡೆದು ಗ್ರಾಮ ಪಂಚಾಯತಿಗಳ ಅಧಿಕಾರವನ್ನು ಯಥಾವತ್ ಕಾಪಾಡಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಆಗ್ರಹಿಸಿದರು. 

ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮದ ಪ್ರಯುಕ್ತ ಮಣಿಹಳ್ಳದಿಂದ ಕೈಕಂಬವರೆಗೆ ನಡೆದ ಪಾದಯಾತ್ರೆ ಬಳಿಕ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ ಯುಪಿಎ ಸರಕಾರದ ಮಹತ್ವಾಕಾಂಕ್ಷಿ ಬಡವರ ಪರ ಕಾರ್ಯಕ್ರಮವಾಗಿದ್ದು, ಇದನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು. 

ಕಾಂಗ್ರೆಸ್ ಹಲವು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಬಡವರ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಿದರೆ, ಬಿಜೆಪಿ ಶ್ರೀಮಂತರ ಪರ ಬಂಡವಾಳಶಾಹಿಗಳ ಪರ ಕೆಲಸ ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹೆಸರು ಕೇಳಿದರೆ ಬಿಜೆಪಿಗೆ ಆಗ್ತಾ ಇಲ್ಲ. ಗಾಂಧೀಜಿಯನ್ನು ಒಪ್ಪದ ಬಿಜೆಪಿ ಅವರ ಹೆಸರು ಅಳಿಸುವ ಪ್ರಯತ್ನ ನಡೆಸುತ್ತಿದೆ. ಇದರ ಬಗ್ಗೆ ಕಾಂಗ್ರೆಸ್ ಸಂಗ್ರಾಮವನ್ನೇ ನಡೆಸಲಿದೆ ಎಂದು ವಾಗ್ದಾಳಿ ನಡೆಸಿದರು. 

ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್, ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪ್ರಮುಖರಾದ ಮಮತಾ ಡಿ ಎಸ್ ಗಟ್ಟಿ, ಎಂ ಅಶ್ವನಿ ಕುಮಾರ್ ರೈ, ಕೆ ಪದ್ಮನಾಭ ರೈ, ಬಿ ಪದ್ಮಶೇಖರ ಜೈನ್, ಬಿ ಎಂ ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಸದಾಶಿವ ಬಂಗೇರ, ಯೂಸುಫ್ ಕರಂದಾಡಿ, ಉಮ್ಮರ್ ಮಂಚಿ, ಜಯಂತಿ ಪೂಜಾರಿ, ಐಡಾ ಸುರೇಶ್, ನವಾಝ್ ಬಡಕಬೈಲು, ಮಲ್ಲಿಕಾ ಶೆಟ್ಟಿ, ವೆಂಕಪ್ಪ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಜೋಸ್ಪಿನ್ ಡಿ ಸೋಜ, ಲೋಲಾಕ್ಷ ಶೆಟ್ಟಿ, ಮುಹಮ್ಮದ್ ನಂದಾವರ, ಚಿತ್ತರಂಜನ್ ಶೆಟ್ಟಿ, ಸುದರ್ಶನ್ ಜೈನ್, ಸ್ಟೀವನ್ ಡಿಸೋಜ, ಅನ್ವರ್ ಕರೋಪಾಡಿ, ಸಿದ್ದೀಕ್ ಸರವು, ಶಬೀರ್ ಸಿದ್ದಕಟ್ಟೆ, ಎ ಬಿ ಅಬ್ದುಲ್ಲ, ಸಂಜೀವ ಪೂಜಾರಿ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ತಾಲೂಕು ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಗಾಂಧೀಜಿ ಅವರನ್ನು ಒಪ್ಪಿಕೊಳ್ಳದ ಬಿಜೆಪಿಗರ ಕನಿಷ್ಠ ಮನೋಭಾವನೆಯ ಅನಾವರಣವೇ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ : ರಮಾನಾಥ ರೈ ವಾಗ್ದಾಳಿ Rating: 5 Reviewed By: karavali Times
Scroll to Top