ಬಂಟ್ವಾಳ, ಜನವರಿ 28, 2026 (ಕರಾವಳಿ ಟೈಮ್ಸ್) : ಹೊಸದಾಗಿ ನಿರ್ಮಾಣವಾಗುತ್ತಿರುವ ಕಾಲೇಜು ಕಟ್ಟಡದ ಕಲ್ಲು ಕಟ್ಟುವ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಕೆಳಕ್ಕೆ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು ಮತ್ತೋರ್ವ ಗಾಯಗೊಂಡ ಘಟನೆ ಕಳ್ಳಿಗೆ ಗ್ರಾಮದ ನೆತ್ರಕೆರೆ ಎಂಬಲ್ಲಿ ಜನವರಿ 27 ರಂದು ಸಂಭವಿಸಿದೆ.
ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ ಅಮೀರ್ ಖಾನ್ ಹಾಗೂ ಗಾಯಗೊಂಡಾತನನ್ನು ಮುಖ್ತಾಧರ್ (37) ಎಂದು ಹೆಸರಿಸಲಾಗಿದೆ. ಇವರು ಕಬೀರುಲ್ ಎಂಬವರು ಕರೆದುಕೊಂಡು ಬಂದಿದ್ದು, ನೆತ್ರಕೆರೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಾಲೇಜು ಕಟ್ಟಡದ ಕೆಲಸಕ್ಕೆ ಬಿಲ್ಡಿಂಗ್ ಕಂಟ್ರಾಕ್ಟರ್ ಕಳುಹಿಸಿದ್ದು, ಸುಮಾರು 6 ತಿಂಗಳಿನಿಂದ ಕಟ್ಟಡದ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಜನವರಿ 27 ರಂದು ಮಧ್ಯಾಹ್ನ ಸುಮಾರು 2.50 ರ ವೇಳೆಗೆ ಮುಖ್ತಾದರ್ ಇನೇ ಮಹಡಿಯಲ್ಲಿ ಕೆಂಪು ಕಲ್ಲು ಕಟ್ಟುತ್ತಿದ್ದ ವೇಳೆ 2ನೇ ಮಹಡಿಯಲ್ಲಿ ಸಿಮೆಂಟ್ ಇಟ್ಟಿಗೆ ಕಟ್ಟುತ್ತಿದ್ದ ಅಮೀರ್ ಖಾನ್ ಆಕಸ್ಮಿಕವಾಗಿ ಕಾಲು ಜಾರಿ 1ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಖ್ತಾಧರ್ ಅವರ ಮೇಲೆ ಬಿದ್ದು ಅಲ್ಲಿಂದ ಇಬ್ಬರೂ ಕೂಡಾ ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಇಬ್ಬರು ಕೂಡಾ ಗಂಭೀರ ಗಾಯಗೊಂಡಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಮೀರ್ ಖಾನ್ ಅದಾಗಲೇ ಮೃತಪಟ್ಟಿದ್ದು, ಮುಖ್ತಾಧರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗಾಯಾಳು ಮುಖ್ತಾಧರ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment