ಬಂಟ್ವಾಳ, ಜನವರಿ 22, 2026 (ಕರಾವಳಿ ಟೈಮ್ಸ್) : ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಅಟೋ ರಿಕ್ಷಾ ಚಾಲಕನನ್ನು ತಲವಾರು ತೋರಿಸಿ ಅವಾಚ್ಯ ಶಬ್ದಗಳಿಂದ ಬೈದ ಘಟನೆ ಬಿ ಕಸಬಾ ಗ್ರಾಮದ ಲೊರೆಟ್ಟೊ ಬಾರೆಕಾಡು ಎಂಬಲ್ಲಿ ಜನವರಿ 20 ರಂದು ರಾತ್ರಿ ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಳ ಗ್ರಾಮದ ನಿವಾಸಿ, ಅಟೋ ರಿಕ್ಷಾ ಚಾಲಕ ಧನುಷ (18) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ಅಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಜನವರಿ 20 ರಂದು ರಾತ್ರಿ ತನ್ನ ಬಾಬ್ತು ಕೆಎ70 ಎ1369 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಮನೆಯಿಂದ ಹೊರಟು ಬಂಟ್ವಾಳ ಕಡೆಗೆ ಬರುತ್ತಾ ರಾತ್ರಿ ಸುಮಾರು 7.40ರ ವೇಳೆಗೆ ಬಿ ಕಸಬಾ ಗ್ರಾಮದ ಲೊರೆಟ್ಟೊ ಬಾರೆಕಾಡು ಎಂಬಲ್ಲಿಗೆ ತಲುಪಿದಾಗ, ಇವರು ಮೂತ್ರ ಶಂಕೆ ಮಾಡಲು ಆಟೊ ರಿಕ್ಷಾ ನಿಲ್ಲಿಸಿ ಮೂತ್ರ ಮಾಡುವ ವೇಳೆ ಸೊರ್ನಾಡು ಕಡೆಯಿಂದ ಬಂದ ಕಾರನ್ನು ಅಡ್ಡ ನಿಲ್ಲಿಸಿ ಇಬ್ಬರು ಇಳಿದು ರಿಕ್ಷಾ ನಿಲ್ಲಿಸು ಎಂದು ಹೇಳಿದ್ದಾರೆ. ಇಬ್ಬರ ಪೈಕಿ ಒಬ್ಬರಲ್ಲಿ ತಲವಾರು ಇದ್ದುದನ್ನು ಕಂಡು ಧನುಷ್ ಹೆದರಿ ರಿಕ್ಷಾವನ್ನು ವಾಪಸ್ ತಿರುಗಿಸುವ ಸಮಯ ಅವರು ರಿಕ್ಷಾವನ್ನು ನಿಲ್ಲಿಸು ಎಂದು ಅವ್ಯಾಚವಾಗಿ ಬೈದಿರುತ್ತಾರೆ. ಇದರಿಂದ ಭಯಬೀತರಾದ ಧನುಷ್ ರಿಕ್ಷಾ ಸ್ಟಾರ್ಟ್ ಮಾಡಿ ವಾಪಸ್ ಮನೆಗೆ ಹೋಗಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2026 ಕಲಂ 126(2), 352 ಜೊತೆಗೆ 3(5) ಬಿ ಎನ್ ಎಸ್ ಮತ್ತು ಕಲಂ 21, 27 ಆರ್ಮ್ಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.












0 comments:
Post a Comment