4ನೇ ವರ್ಷದ ಲವ-ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ ಸಂಭ್ರಮ
ಉಳ್ಳಾಲ, ಜನವರಿ 11, 2026 (ಕರಾವಳಿ ಟೈಮ್ಸ್) : ಜಾತಿ-ಮತ, ಭಾಷೆ, ಧರ್ಮದ ಎಲ್ಲೆ ಮೀರಿ ಕಂಬಳ ಕೀಡೆಯ ಮೂಲಕ ನಿಮ್ಮತನವನ್ನು, ನಿಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ತುಳುನಾಡಿನ ಜನರ ಬದ್ದತೆಗೆ ಬಿಗ್ ಸೆಲ್ಯೂಟ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.
ಸ್ಪೀಕರ್ ಯು ಟಿ ಖಾದರ್ ಅಧ್ಯಕ್ಷತೆಯಲ್ಲಿ ಬೋಳ-ಮೋರ್ಲದಲ್ಲಿ ನಡೆಯುತ್ತಿರುವ 4ನೇ ವರ್ಷದ ಲವ-ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವದ ಪ್ರಯುಕ್ತ ಡಿ 10 ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಪಕ್ಷಗಳ ಶಾಸಕರ ಹೃದಯ ಗೆದ್ದ ಸ್ಪೀಕರ್ ಯು ಟಿ ಖಾದರ್ ಅವರನ್ನೂ ಈ ಜಿಲ್ಲೆಯ ಜನ ಉಳಿಸಿಕೊಳ್ಳಬೇಕು ಜೊತೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಪೂರ್ಣವಾಗಿ ಕಾಂಗ್ರೆಸ್ ಮಯಗೊಳಿಸಿ ಎಂದು ಕರೆ ನೀಡಿದರು.
ಸಂಸದೀಯ ಮತ್ತು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಜನಸಂದಣಿಯ ಮೂಲಕ ಕಂಬಳೋತ್ಸವ ಆಚರಿಸುವ ಈ ನಾಡಿನ ಜನರ ಸಂಸ್ಕøತಿಯ ಪ್ರೇಮವನ್ನು ಮೆಚ್ಚಲೇಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲ ಕಂಬಳಗಳಿಗೂ ತಲಾ ಐದು ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತಾವನೆಗೈದು ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ, ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್, ಕಂಬಳದ ಬಾಕಿ ಅನುದಾನ ತಕ್ಷಣ ಬಿಡುಗಡೆಗೆ ಸರಕಾರವನ್ನು ಆಗ್ರಹಿಸಿದರು. ಸರಕಾರಕ್ಕೆ ಕಂಬಳಕ್ಕೆ ಅನುದಾನ ಒದಗಿಸಲು ಕಷ್ಟವಾದರೆ ನಾನು ನನ್ನ ಶಾಸಕ ಅನುದಾನದಿಂದ ಒಂದು ಕೋಟಿ ರೂಪಾಯಿ ನೀಡಲು ಸಿದ್ದನಿದ್ದೇನೆ ಎಂದರು.
ಅತಿವೃಷ್ಟಿ, ಅನಾವೃಷ್ಟಿ, ಬರ, ಸಂಕಷ್ಟದ ಸಂದರ್ಭ ನಾಡಿಗೆ ಒದಗಿ ಬಂದರೂ ತುಳುನಾಡಿನ ಜನ ಕಂಬಳ ಉಳಿಸಿಕೊಂಡು ಬಂದಿದ್ದಾರೆ. ಮಕ್ಕಳಂತೆ ಲಾಲಿಸಿ ಪೆÇೀಷಿಸುವ ಮಾಲಕರು ಯಾವುದೇ ಕಾರಣಕ್ಕೂ ಕೋಣಗಳನ್ನು ಹಿಂಸಿಸುವುದಿಲ್ಲ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಅಧಿಕಾರ ಶಾಶ್ವತ ಅಲ್ಲ, ಆದರೆ ಕಂಬಳ ಶಾಶ್ವತವಾಗಿ ಉಳಿಯಬೇಕು ಎಂದು ಆಶಿಸಿದರು.
ಶ್ರೀ ಕ್ಷೇತ್ರ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶಿರ್ವಚನಗೈದರು. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಡಾ ಮಂಜುನಾಥ ಭಂಡಾರಿ, ಐವನ್ ಡಿಸೋಜ, ರಾಜೀವ್ ಗೌಡ, ಸತೀಶ್ ಸೈಲ್, ಮಾಜಿ ಸಚಿವ ಬಿ ರಮಾನಾಥ ರೈ, ಪ್ರಮುಖರಾದ ಹರೀಶ್ ಕುಮಾರ್, ಡಾ ಎಂ ಎನ್ ರಾಜೇಂದ್ರ ಕುಮಾರ್, ದೇವಿಪ್ರಸಾದ್ ಶೆಟ್ಟಿ ಬೆಳಪು, ವೈ ಅಬ್ದುಲ್ಲ ಕುಂಞÂ, ಎಸ್ ಆರ್ ಸತೀಶ್ಚಂದ್ರ, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಪದ್ಮರಾಜ್ ಪೂಜಾರಿ, ಮಿಥುನ್ ರೈ, ಮಮತಾ ಗಟ್ಟಿ, ನಿಗಮ ಭಂಡಾರಿ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಪ್ರಕಾಶ್ ಕಾಂಚನ್, ಲಾವಣ್ಯ ಬಳ್ಳಾಲ್, ಕಣಚೂರು ಮೋನು, ಡಿಸಿಎಂ ಆಪ್ತ ಕಾರ್ಯದರ್ಶಿ ಶ್ರೀಧರ, ಗುಣಪಾಲ ಕಡಂಬು, ಡಾ ಯು ಟಿ ಇಫ್ತಿಕಾರ್ ಅಲಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜಾರಾಂ ಭಟ್, ವೆಂಕಪ್ಪ ಕಾಜವ, ಭಾಸ್ಕರ್ ಎಸ್ ಕೋಟ್ಯಾನ್, ಧನಲಕ್ಷ್ಮಿ ಪೂಜಾರಿ ಸುರತ್ಕಲ್, ಭಾಸ್ಕರ್ ದೇವಾಡಿಗ ಬೈಂದೂರು, ಗಣೇಶ್ ಪಂಬದ ಬಾಯಾರು, ಚಂದ್ರಶೇಖರ್ ಪುಂಡಿಕಾಯಿ, ಅಪೇಕ್ಷಾ ಪುಂಡಿಕೈ, ಆಯಿಷಾ ಐಫಾ ಮೊದಲಾದವರನ್ನು ಸನ್ಮಾನಿಸಲಾಯಿತು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸ್ವಾಗತಿಸಿ, ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.



























0 comments:
Post a Comment