ರೋಸ್ ಕಾರ್ಯಕ್ರಮದಲ್ಲಿ ಪರಿಶೀಲನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ರೋಸ್ ಕಾರ್ಯಕ್ರಮದಲ್ಲಿ ಪರಿಶೀಲನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

10 January 2026

ರೋಸ್ ಕಾರ್ಯಕ್ರಮದಲ್ಲಿ ಪರಿಶೀಲನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು, ಜನವರಿ 11, 2026 (ಕರಾವಳಿ ಟೈಮ್ಸ್) : ಮದುವೆ ರೋಸ್ ಕಾರ್ಯಕ್ರಮಕ್ಕೆ ಸಿ ಎಲ್ ಸನ್ನದ್ದು ಪರಿಶೀಲನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಮೈಮೇಲೆ ಕೈ ಹಾಕಿ ಕರ್ತವ್ಯಕೆ ಅಡ್ಡಿ ಪಡಿಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನವರಿ 9 ರಂದು ರಾತ್ರಿ ಸುಮಾರು 9.35 ರಿಂದ 10.30 ರ ಮಧ್ಯದ ಅವಧಿಯಲ್ಲಿ ಮಂಗಳೂರು ಉಪವಿಭಾಗ ಅಬಕಾರಿ ಅಧೀಕ್ಷಕಿ ಗಾಯತ್ರಿ ಸಿ ಎಚ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಮಫ್ತಿಯಲ್ಲಿ ಮಂಗಳೂರು ತಾಲೂಕು ಕೆಲರೈ ಚರ್ಚ್ ಆವರಣದಲ್ಲಿ ನಡೆಯುತ್ತಿರುವ ಜಾನೇಟ್ ಎಲಿಜೆಬೆತ್ ಡಿಸೋಜ ಎಂಬವರ ಮದುವೆಯ ರೋಸ್ ಕಾರ್ಯಕ್ರಮಕ್ಕೆ ಸಿ ಎಲ್-5 ಸನ್ನದ್ದು ಪಡೆದಿದ್ದು, ಸಿ ಎಲ್-5 ಸನ್ನದ್ದು ಪರಿಶೀಲನೆಯ ಬಗ್ಗೆ ಹೋದಾಗ ಮದ್ಯದ ಬಿಲ್ಲುಗಳನ್ನು ಹಾಜರುಪಡಿಸುವಂತೆ ಕೇಳಿದಾಗ ಬಿಲ್ಲುಗಳನ್ನು ತಡವಾಗಿ £ೀಡಿ ಸ್ಥಳದಲ್ಲಿ ಪಾನಮತ್ತರಾಗಿದ್ದ ಸುಮಾರು 4 ರಿಂದ 5 ಜನರು ಅಬಕಾರಿ ಇಲಾಖೆಯ ಸಿಬ್ಬಂದಿ ಶಿವಲಿಂಗಪ್ಪ ಸಿಂಗನಹಳ್ಳಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಮೈಮೇಲೆ ಕೈ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೇ ಅವ್ಯಾಚ್ಯ ಶಬ್ದಗಳಿಂದ £ಂದಿಸಿ ವ್ಯಂಗ್ಯವಾಗಿ ಮಾತಾಡಿ ತೊಂದರೆಪಡಿಸಿದ್ದಾರೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2026 ಕಲಂ 132, 352 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್ ಗವಿರಾಜ್ ಆರ್ ಪಿ ಅವರು ತ£ಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಪಿಎಸ್ಸೈ ಅರುಣ್ ಕುಮಾರ್ ನೇತೃತ್ವದ ತಂಡ ರಚಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರೋಸ್ ಕಾರ್ಯಕ್ರಮದಲ್ಲಿ ಪರಿಶೀಲನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top