ವಾರ್ಷಿಕ ಫೈಲಿಂಗ್ ಮಾಡದ ದ.ಕ. ಬಾರ್ ಎಸೋಸಿಯೇಶನ್ ನೋಂದಣಿ ರದ್ದು : ಆಕ್ಷೇಪಣೆಗೆ 7 ದಿನಗಳ ಅವಕಾಶ - Karavali Times ವಾರ್ಷಿಕ ಫೈಲಿಂಗ್ ಮಾಡದ ದ.ಕ. ಬಾರ್ ಎಸೋಸಿಯೇಶನ್ ನೋಂದಣಿ ರದ್ದು : ಆಕ್ಷೇಪಣೆಗೆ 7 ದಿನಗಳ ಅವಕಾಶ - Karavali Times

728x90

20 January 2026

ವಾರ್ಷಿಕ ಫೈಲಿಂಗ್ ಮಾಡದ ದ.ಕ. ಬಾರ್ ಎಸೋಸಿಯೇಶನ್ ನೋಂದಣಿ ರದ್ದು : ಆಕ್ಷೇಪಣೆಗೆ 7 ದಿನಗಳ ಅವಕಾಶ

ಮಂಗಳೂರು, ಜನವರಿ 21, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಬಾರ್ ಅಸೋಸಿಯೇಷನ್, ಡಿಸ್ಟ್ರಿಕ್ಟ್ ಕೋರ್ಟು ಬಿಲ್ಡಿಂಗ್, ಮಂಗಳೂರು, ನೊಂದಣಿ ಸಂಖ್ಯೆ:178/1986-87ರಲ್ಲಿ 1986 ರ ಡಿ. 3 ರಂದು, ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960 ರಡಿ ನೊಂದಣಿಗೊಂಡಿದ್ದು, ವಾರ್ಷಿಕ ಫೈಲಿಂಗ್ ಮಾಡದೇ 38 ವರ್ಷಗಳು ಕಳೆದಿದ್ದುದರಿಂದ ಸಂಘದ ಅಸ್ತಿತ್ವ ಇಲ್ಲವೆಂದು ಪರಿಗಣಿಸಿ, ಇದರ ನೊಂದಣಿಯನ್ನು ರದ್ದುಗೊಳಿಸಬೇಕಾಗಿದೆ. ಈ ಸಂಬಂಧ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಬಾರ್ ಅಸೋಸಿಯೇಶನ್ನಿನ ನೊಂದಾಯಿತ ಸದಸ್ಯರು ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ದಿನಾಂಕದಿಂದ 7 ದಿನಗಳೊಳಗೆ ಜಿಲ್ಲಾ ಸಂಘಗಳ ನೊಂದಣಿ ಕಛೇರಿಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಭಾವಿಸಿ ಇದರ ನೊಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘ ಸಂಸ್ಥೆಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವಾರ್ಷಿಕ ಫೈಲಿಂಗ್ ಮಾಡದ ದ.ಕ. ಬಾರ್ ಎಸೋಸಿಯೇಶನ್ ನೋಂದಣಿ ರದ್ದು : ಆಕ್ಷೇಪಣೆಗೆ 7 ದಿನಗಳ ಅವಕಾಶ Rating: 5 Reviewed By: karavali Times
Scroll to Top