ಮಂಗಳೂರು, ಜನವರಿ 21, 2026 (ಕರಾವಳಿ ಟೈಮ್ಸ್) : ಭಾರತ ಚುನಾವಣಾ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ, ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದ್ದು, 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಈ ಕೆಳಕಂಡ ವಿವರಗಳನ್ನು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಅವರಿಗೆ ಮಾಹಿತಿಯನ್ನು ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬೇಕು.
ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು. ಪ್ರೊಜೆನಿ (ಸಂತತಿ) ಮ್ಯಾಪಿಂಗ್ ಅಂದರೆ, 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ/ ತಾಯಿ/ ಅಜ್ಜ/ ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಳ್ಳಬೇಕು.
2002 ರ ಮತದಾರರಾಗಿದ್ದಲ್ಲಿ ನೀವು 2002ರಲ್ಲಿ ವಾಸವಿದ್ದಂತಹ ವಿಧಾನಸಭಾ ಕ್ಷೇತ್ರ ಹೆಸರು/ ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ) ಅವರಿಗೆ ಮತದಾರರು ಮಾಹಿತಿ ನೀಡಿ ಸಹಕರಿಸಬೇಕು.
ಒಂದು ವೇಳೆ ನೀವು 2002ರಲ್ಲಿ ಮತದಾರರಾಗಿ ಇಲ್ಲದಿದ್ದಲ್ಲಿ, ನಿಮ್ಮ ತಂದೆ/ ತಾಯಿ/ ಅಜ್ಜ/ ಅಜ್ಜಿಯವರು ವಾಸವಿದ್ದಂತಹ ವಿಧಾನಸಭಾ ಕ್ಷೇತ್ರದ ಹೆಸರು/ ಸಂಖ್ಯೆ, ಭಾಗ ಸಂಖ್ಯೆ, ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ ಅವರಿಗೆ ಮತದಾರರು ಮಾಹಿತಿ ನೀಡಬೇಕು.
2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಲಿಂಕ್ https://ceo.karnataka.gov.in/search/en ಅಥವಾ https://voters.eci.gov.in/searchInSIR/S2UA4DPDF-JK4QWODSE ಮೂಲಕ ಹುಡುಕಬಹುದು. ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯವರ ದೂರವಾಣಿ ಸಂಖ್ಯೆ ಪಡೆಯಲು ಲಿಂಕ್ https://electoralsearch.eci.gov.in/uesfmempmlkypo ಮೂಲಕ ಹುಡುಕಬಹುದು. ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಯವರು ಕರೆ ಸ್ವೀಕರಿಸದ್ದಿದಲ್ಲಿ ಲಿಂಕ್ https://voters.eci.gov.in/home/bookACallRequest ಮೂಲಕ ಕರೆಯನ್ನು (Book a Call with BLO) ಬುಕ್ ಮಾಡಬಹುದು.
ಸಾರ್ವಜನಿಕರು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮ್ಯಾಪಿಂಗ್ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












0 comments:
Post a Comment