ಬಂಟ್ವಾಳ, ಜನವರಿ 09, 2026 (ಕರಾವಳಿ ಟೈಮ್ಸ್) : ಉಲ್ಲಾಸ್ ಐಸ್ ಕ್ರೀಂ ಮಾರ್ಕೆಟಿಂಗ್ ಮಾಲಕ ಅಬ್ದುಲ್ ಹಕೀಂ ಅವರ ಮಾಲಕತ್ವದಲ್ಲಿ ಪಾಣೆಮಂಗಳೂರು ಮಾಂಡೋವಿ ಶೋಂ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಇಲಾಟೋ ಸೆಲೆಬ್ರಿ ಐಸ್ ಕ್ರೀಂ ಪಾರ್ಲರ್ ಹಾಗೂ ಇಲಾಟೋ ಈವೆಂಟ್ಸ್ ಆಂಡ್ ಸ್ಟೇ ಗೆಸ್ಟ್ ಹೌಸ್ ಮಾದರಿಯ ವ್ಯವಸ್ಥೆಯು ಜನವರಿ 10 ರಂದು ಶನಿವಾರ (ಇಂದು) ಸಂಜೆ 4.30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಉಲ್ಲಾಸ್ ಐಸ್ ಕ್ರೀಂ ಹಾಗೂ ಮಿಲ್ಕ್ ಪ್ರಾಡಕ್ಸ್ ಆಡಳಿತ ಪಾಲುದಾರರಾದ ಬಿ ಎಚ್ ಉದಯ ಪೈ ಹಾಗೂ ಬಿ ಎಚ್ ವಿದ್ಯಾ ಯು ಪೈ ಅವರು ಸಂಸ್ಥೆಯನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್, ಶಾಸಕರುಗಳಾದ ಯು ರಾಜೇಶ್ ನಾಯಕ್, ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ ರಮಾನಾಥ ರೈ, ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು, ಕರ್ನಾಟಕ ರಾಜ್ಯ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ ಯು ಟಿ ಇಫ್ತಿಕಾರ್ ಅಲಿ, ಬಂಟ್ವಾಳ ಎಸ್.ವಿ.ಎಸ್. ದೇವಸ್ಥಾನದ ಅರ್ಚಕ ಎ ಸದಾನಂದ ಭಟ್, ಕೆ ರಾಘವೇಂದ್ರ ಭಟ್ ಕೊಡಂಬೆಟ್ಟು, ಲೆವಿನ್ ಇಲೆಕ್ಟ್ರಿಕಲ್ ಮಾಲಕ ಪಿಯೂಸ್ ಎಲ್ ರೋಡ್ರಿಗಸ್, ದುಬೈ ಐ.ಬಿ ಗ್ರೂಪ್ ಉದ್ಯಮಿ ಇಕ್ಬಾಲ್ ಬಾವಾ, ಪುರಸಭಾ ಸದಸ್ಯ ಲುಕ್ಮಾನ್ ಬಿ ಸಿ ರೋಡು, ಪಿ.ಎಸ್ ಬೀಡಿ ಮಾಲಕ ಹಾಜಿ ಪಿ ಎಸ್ ಅಬ್ದುಲ್ ಹಮೀದ್, ವಿವೇಕ್ ಟ್ರೇಡರ್ಸ್ ಮಾಲಕ ನರೇಶ್ ಶೆಣೈ, ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಟ್ರಸ್ಟಿ ಸನಾ ಅಲ್ತಾಫ್, ಕ್ಯಾಂಬ್ರಿಜ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಸುಮಿತ್ರಾ ಗೌಡ, ರೂಪೇಶ್ ಶೆಟ್ಟಿ, ಶರಣ್ ಚಿಲಿಂಬಿ, ಹಿಶಾಂ, ಅನಾಮಿಕ, ಅಮೀನ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿ ಸಹಕರಿಸಿ ಬೆಂಬಲಿಸುವಂತೆ ಉಲ್ಲಾಸ್ ಮಾರ್ಕೆಟಿಂಗ್ ಮಾಲಕ ಉದ್ಯಮಿ ಅಬ್ದುಲ್ ಹಕೀಂ, ಸುರಯ್ಯಾ ಪರ್ವಿನ್, ದುಬೈ ಐಬಿ ಗ್ರೂಪ್ ಆಪರೇಶನ್ ಮ್ಯಾನೇಜರ್ ಇರ್ಫಾನ್ ರಿಯಾಝ್, ದುಬೈ ಇಂಟೀರಿಯರ್ ಡಿಸೈನ್ ಮುಹಮ್ಮದ್ ನಝೀರ್, ಸೌದಿ ಅರೇಬಿಯಾ ಕನ್ಟ್ರಕ್ಷನ್ ಆಂಡ್ ಕಾಂಕ್ರಿಟ್ ಕಂಪೆನಿ ಇದರ ಮುಹಮ್ಮದ್ ಶಬೀರ್ ಅವರುಗಳು ಜಂಟಿಯಾಗಿ ವಿನಂತಿಸಿದ್ದಾರೆ.





















0 comments:
Post a Comment