ಪೆರುವಾಯಿ ಸೊಸೈಟಿ ಆವರಣದಿಂದ ದನ ಕದ್ದ ಪ್ರಕರಣ : ಒಂದೂವರೆ ತಿಂಗಳ ಬಳಿಕ ಓರ್ವ ಸೆರೆ - Karavali Times ಪೆರುವಾಯಿ ಸೊಸೈಟಿ ಆವರಣದಿಂದ ದನ ಕದ್ದ ಪ್ರಕರಣ : ಒಂದೂವರೆ ತಿಂಗಳ ಬಳಿಕ ಓರ್ವ ಸೆರೆ - Karavali Times

728x90

8 January 2026

ಪೆರುವಾಯಿ ಸೊಸೈಟಿ ಆವರಣದಿಂದ ದನ ಕದ್ದ ಪ್ರಕರಣ : ಒಂದೂವರೆ ತಿಂಗಳ ಬಳಿಕ ಓರ್ವ ಸೆರೆ

 ಬಂಟ್ವಾಳ, ಜನವರಿ 08, 2026 (ಕರಾವಳಿ ಟೈಮ್ಸ್) : ತಾಲೂಕಿನ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಕಳೆದ ನವೆಂಬರತ 18 ರಂದು ದನ ಕದ್ದ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಒಂದೂವರೆ ತಿಂಗಳ ಬಳಿಕ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಂಧಿತ ಆರೋಪಿಯನ್ನು ಉಳ್ಳಾಲ-ಕೋಡಿ ನಿವಾಸಿ ಝುಲ್ಫಾನ್ ಮಾಲಿಕ್ ಉಳ್ಳಾಲ್ (30) ಎಂದು ಹೆಸರಿಸಲಾಗಿದೆ.

ನವೆಂಬರ್ 18 ರಂದು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬವರ ಒಟ್ಟು 4  ದನಗಳು ಕಳ್ಳತನವಾಗಿದ್ದರ ಬಗ್ಗೆ ಗಣೇಶ ರೈ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

 ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಜನವರಿ 8 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು  ಆರೋಪಿಯಾದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪೆರುವಾಯಿ ಸೊಸೈಟಿ ಆವರಣದಿಂದ ದನ ಕದ್ದ ಪ್ರಕರಣ : ಒಂದೂವರೆ ತಿಂಗಳ ಬಳಿಕ ಓರ್ವ ಸೆರೆ Rating: 5 Reviewed By: lk
Scroll to Top