ಮಂಗಳೂರು, ಜನವರಿ 19, 2026 (ಕರಾವಳಿ ಟೈಮ್ಸ್) : ಕೆನರಾ ಅಸೋಸಿಯೇಷನ್ (ರಿ) ನೀಡುವ “ಕೆನರಾ ರತ್ನ” ಪ್ರಶಸ್ತಿಯನ್ನು ತುಳು ಭಾಷೆ ಹಾಗೂ ಸಂಸ್ಕೃತಿಗೆ ನೀಡಿದ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಯಾನಂದ ಕತ್ತಲ್ ಸಾರ್ ಅವರಿಗೆ ನೀಡಲಾಗಿದೆ.
ಅನಂತರ ನಗರದಲ್ಲಿ ಜನವರಿ 17 ರಂದು ನಡೆದ ಕೆನರಾ ಅಸೋಸಿಯೇಷನ್ (ರಿ) ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ಇದರ 16ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಎಸೋಸಿಯೇಷನ್ ಉಪಾಧ್ಯಕ್ಷ ವಿಜಯ್ ಕುಲಾಲ್ ಎಂ. ಪ್ರಶಸ್ತಿ ಪ್ರದಾನ ನೆರವೇರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಯಾನಂದ ಕತ್ತಲ್ ಸರ್ ಎಸೋಸಿಯೇಷನ್ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತುಳು ನಾಡು, ತುಳು ಸಂಸ್ಕೃತಿ, ಪ್ರಾಚೀನ ತುಳು ಲಿಪಿ, ತುಳುವರ ಆಹಾರ ಪದ್ದತಿಗಳ ಮಹತ್ವದ ಬಗ್ಗೆ ವಿವರಿಸಿದರು.
ಎಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ತುಳು ಭಾಷಣ ಸ್ಪರ್ಧೆ, ಕೃಷ್ಣ ರಾಧೆ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕು ಆರಾಧ್ಯ ದೇರಾಜೆ, ರಾಷ್ಟ್ರ ಮಟ್ಟದ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬಹುಮುಖ ಪ್ರತಿಭೆ ಕು ಶನಯ ಶರತ್ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಕು ತ್ವಿಷಾ ಪಿ ಆರ್, ಮನ್ವಿತ್ ಆರ್, ತನಿಷ್ ರೈ ಎನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ವಿನಯ ಕಟ್ಟೆ, ಶ್ರೀಮತಿ ಸ್ಮಿತಾ ಸುನಿಲ್ ಶೆಟ್ಟಿ, ನವೀನ್ ಶೆಟ್ಟಿ, ಯಶವಂತ್, ಯೋಗೇಶ್ ದೇರಾಜೆ, ಶ್ರೀಮತಿ ಶ್ವೇತಾ ಆರ್ ಹೆಗ್ಡೆ, ವಸಂತ್ ಪೂಜಾರಿ, ವಿಠ್ಠಲ್ ಗೊಲ್ಲ, ಸಚಿನ್ ರೈ, ಸುಭಾಷ್, ಶ್ರೀಮತಿ ಮಮತಾ ಲೋಕೇಶ್ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಎಸೋಸಿಯೇಶನ್ ಸದಸ್ಯರಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಿತು. ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಮೋಕ್ಷಪ್ರದ ಮತ್ತು ದೀಪಶ್ರೀ ಪ್ರಾರ್ಥಿಸಿದರು. ಶ್ರೀಮತಿ ಶ್ವೇತಾ ಹೆಗ್ಡೆ ಮತ್ತು ಶ್ರೀಮತಿ ರೂಪ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.












0 comments:
Post a Comment