ಕೊಡಾಜೆ : ಐಕ್ಯ ವೇದಿಕೆಯ ನೂತನ ಕಚೇರಿ ಉದ್ಘಾಟನೆ
ಬಂಟ್ವಾಳ, ಜನವರಿ 19, 2026 (ಕರಾವಳಿ ಟೈಮ್ಸ್) : ಐಕ್ಯ ವೇದಿಕೆ (ರಿ) ಕೊಡಾಜೆ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ ಕೊಡಾಜೆ ಜಂಕ್ಷನ್ ಬಳಿ ಜನವರಿ 18 ರಂದು ನಡೆಯಿತು.
ಸಯ್ಯಿದ್ ಇಬ್ರಾಹಿಂ ಹಂಝ ಅಲ್ ಹಾದಿ ತಂಙಳ್ ಪಾಟ್ರಕೋಡಿ ಉದ್ಘಾಟಿಸಿದರು, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಾಜೆ ಬಿಜೆಎಂ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೆÇನ್ಮಲ ಮಾತನಾಡಿ, ಪ್ರತಿಯೊಬ್ಬರೂ ಐಕ್ಯತೆಯಿಂದ ಬಾಳಿ ಬದುಕುವ ಮೂಲಕ ಈ ನೆಲ, ಈ ದೇಶದ ಶಾಂತಿ ಸೌಹಾರ್ದತೆಯ ಭವ್ಯ ಪರಂಪರೆ ಎತ್ತಿ ಹಿಡಿಯೋಣ. ಈ ನಿಟ್ಟಿನಲ್ಲಿ ಐಕ್ಯ ವೇದಿಕೆಯು ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.
ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್, ಉದ್ಯಮಿಗಳಾದ ಕೆ ಅದ್ದ ಹಾಜಿ ಕೊಡಾಜೆ, ಅಹ್ಮದ್ ಖಾನ್ ಕೊಡಾಜೆ, ತರ್ಬಿಯತುಲ್ ಇಸ್ಲಾಂ ಮದ್ರಸ ಅಧ್ಯಾಪಕ ಹಾರಿಸ್ ಮುಸ್ಲಿಯಾರ್, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಅಲ್ ಅಮೀನ್ ಚಾರಿಟಿ ಮೆನೇಜಿಂಗ್ ಡೈರೆಕ್ಟರ್ ಸಿದ್ದೀಕ್ ಸೂರ್ಯ, ಕೊಡಾಜೆ ಬಿಜೆಎಂ ಕೋಶಾಧಿಕಾರಿ ಪಿ.ಕೆ. ಅಬ್ಬಾಸ್ ಪರ್ಲೋಟ್ಟು, ಕಾರ್ಯದರ್ಶಿ ಹಮೀದ್ ಪರ್ಲೊಟ್ಟು, ಮಸೀದಿ ಪುನರ್ ನಿರ್ಮಾಣ ಸಮಿತಿ ಕಾರ್ಯದರ್ಶಿ ಯೂಸುಫ್ ಶಹೀದ್, ಡಿಗ್ನಿಟಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ನವಾಝ್ ಭಗವಂತಕೋಡಿ, ಕೊಡಾಜೆ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ, ಸಾಮಾಜಿಕ ಕಾರ್ಯಕರ್ತ ಅತಾವುಲ್ಲಾ ನೇರಳಕಟ್ಟೆ, ಇಂಜಿನಿಯರ್ ಲತೀಫ್ ಕೊಡಾಜೆ, ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ಸದಸ್ಯ ಇರ್ಫಾನ್ ಪಂತಡ್ಕ, ಐಕ್ಯ ವೇದಿಕೆಯ ಸ್ಥಾಪಕಾಧ್ಯಕ್ಷ, ಸಲಹೆಗಾರ ಫಾರೂಕ್ ಗೋಳಿಕಟ್ಟೆ, ಉಪಾಧ್ಯಕ್ಷ ರಝಾಕ್ ಅನಂತಾಡಿ, ಆದಂ ಎಸ್ಸೆಮ್ಮೆಸ್ ಕೋಶಾಧಿಕಾರಿ ರಫೀಕ್ ಎಸ್.ಎಸ್. ಕೊಡಾಜೆ, ಸಾಂಸ್ಕೃತಿಕ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಶರೀಫ್ ಅನಂತಾಡಿ ಸ್ವಾಗತಿಸಿ, ವಂದಿಸಿದರು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

















0 comments:
Post a Comment