ಬಂಟ್ವಾಳ, ಜನವರಿ 25, 2026 (ಕರಾವಳಿ ಟೈಮ್ಸ್) : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ವಿಟ್ಲಮುಡ್ನೂರು ಗ್ರಾಮದ ಎಲ್ಯಣ್ಣ ಪೂಜಾರಿ ಅವರ ತೋಟದ ಬಳಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ.
ಬಂಧಿತರನ್ನು ಮಹೇಶ್, ಬಾಬು, ಅನಂದ ಹಾಗೂ ಅಣ್ಣು ಎಂದು ಹೆಸರಿಸಲಾಗಿದೆ. ಭಾನುವಾರ ಮಧ್ಯಾಹ್ನ 1.20 ರ ವೇಳೆಗೆ ವಿಟ್ಲ ಪೆÇಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ವಿಟ್ಲಮುಡ್ನೂರು ಗ್ರಾಮದ ಎಲ್ಯಣ್ಣ ಪೂಜಾರಿಯವರ ತೋಟದ ಬಳಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಕೋಳಿ ಅಂಕ ಜೂಜಾಟ ನಡೆಯುತ್ತಿರುವುದು ಕಂಡುಬಂದಿದೆ.
ಪೊಲೀಸರನ್ನು ಕಂಡು ಕೆಲವರು ಓಡಿ ಹೋಗಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ 4,390/- ರೂಪಾಯಿ ನಗದು ಹಣ, 4,550/- ರೂಪಾಯಿ ಮೌಲ್ಯದ 8 ಹುಂಜಗಳು, 500 ರೂಪಾಯಿ ಮೌಲ್ಯದ 10 ಕೋಳಿ ಬಾಳುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























0 comments:
Post a Comment