ಕಡಬ, ಜನವರಿ 25, 2026 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ತೋಟದಲ್ಲಿನ ಅಡಿಕೆ ಕಳವುಗೈದ ಘಟನೆ ಅಲಂಕಾರು ಎಂಬಲ್ಲಿ ಶನಿವಾರ ಮಧ್ಯರಾತ್ರಿ ವೇಳೆ ನಡೆದಿದೆ.
ಇಲ್ಲಿನ ನಿವಾಸಿ ಸತೀಶ್ (36) ಅವರ ತೋಟದಲ್ಲಿ ಈ ಕಳವು ಕೃತ್ಯ ನಡೆದಿದ್ದು, ಜನವರಿ 21 ರಂದು ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಇವರು ತೋಟಕ್ಕೆ ನೀರು ಹಾಯಿಸುವ ವೇಳೆ ಯಾರೋ ಮಾತನಾಡುವ ಶಬ್ದ ಕೇಳಿ ಟಾರ್ಚ್ ಲೈಟ್ ನಂದಿಸಿ ಹತ್ತಿರ ಹೋದಾಗ, ಇಬ್ಬರು ವ್ಯಕ್ತಿಗಳು ತೋಟದಿಂದ ಕಳವು ಮಾಡಿದ ಅಡಿಕೆಯನ್ನು ತೆಗೆದುಕೊಂಡು ಓಡಿ ಹೋಗಿ, ತೋಟದ ಬೇಲಿಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿ ಹಾಕಿ ಪರಾರಿಯಾಗಿರುತ್ತಾರೆ. ಕಳವುಗೈದ ಅಡಿಕೆಯ ಮೌಲ್ಯ ಸುಮಾರು 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸತೀಶ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























0 comments:
Post a Comment