ಕುಕ್ಕಾಜೆ-ಪತ್ತುಮುಡಿ ಅಲೀಮಾ ಪ್ಲಾಝಾ ಸಂಕೀರ್ಣದಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ
ಬಂಟ್ವಾಳ, ಜನವರಿ 04, 2026 (ಕರಾವಳಿ ಟೈಮ್ಸ್) : ಆರ್ಥಿಕ ಚಟುವಟಿಕೆ ಇಲ್ಲದೆ ಯಾವ ಊರು ಕೂಡಾ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಚಟುವಟಿಕೆ ಕೈಗೊಂಡಾಗ ಅಭಿವೃದ್ದಿ ತನ್ನಿಂತಾನೆ ಆಗುತ್ತದೆ. ಸಹಕಾರಿ ಕ್ಷೇತ್ರದ ಯಶಸ್ಸಿನ ಗುಟ್ಟು ಎಲ್ಲಾ ವರ್ಗದ ಜನರ ಒಗ್ಗಟ್ಟಿನಲ್ಲಿ ಅಡಗಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಅಭಿಪ್ರಾಯಪಟ್ಟರು.
ಕುಕ್ಕಾಜೆ-ಪ್ತತುಮುಡಿಯ ಅಲೀಮಾ ಪ್ಲಾಝಾ ಸಂಕೀರ್ಣದಲ್ಲಿ ಜ 4 ರಂದು ಬಂಟ್ವಾಳ, ಉಳ್ಳಾಲ ಹಾಗೂ ಮಂಗಳೂರು ತಾಲೂಕು ವ್ಯಾಪ್ತಿ ಹೊಂದಿರುವ ‘ಇಂದಿರಾ ದರ್ಶಿನಿ ಸಹಕಾರಿ ಸಂಘ (ನಿ)’ ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಬಡವರ ಬಗ್ಗೆ ತುಂಬು ಕಾಳಜಿ ಹೊಂದಿದ್ದ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಉದ್ಘಾಟನೆಯಾಗಿರುವ ಇಂದಿರಾ ದರ್ಶಿ£ ಸಹಕಾರಿ ಸಂಘ ಯಸಸ್ವಿಯಾಗಲಿ. ಗರೀಬೀ ಹಠಾವೋ ಯೋಜನೆಯ ಮೂಲಕ ಬಡತನ ನಿರ್ಮೂಲನೆಗೆ ಪ್ರಯತ್ನಿಸಿರುವ ಇಂದಿರಾ ಗಾಂಧಿ ಹೆಸರಿನ ಬ್ಯಾಂಕ್ ಈ ಪ್ರದೇಶದ ಜನರಿಗೆ ಆರ್ಥಿಕ ಶಕ್ತಿ ತುಂಬಲಿ. ಹೆಸರಿಗೆ ಪೂರಕವಾಗಿ ನಿರ್ದೇಶಕರು ಕೆಲಸ ಮಾಡಿ ಜನ ಸೇವೆ ಮಾಡಿ ಎಂದು ಹಾರೈಸಿದರು.
ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಮಾತನಾಡಿ, ದೇಶದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮೊದಲಾದ ಬೆಳವಣಿಗೆಗಳಿಗೆ ಸಹಕಾರಿ ಕ್ಷೇತ್ರ ಹೆಚ್ಚಿನ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಶಿಕ್ಷಕರ, ಪದವೀಧರ ಕ್ಷೇತ್ರಗಳನ್ನು ಹೊಂದಿ ವಿಧಾನ ಪರಿಷತ್ತಿನಲ್ಲಿ ಪ್ರಾತಿನಿಧ್ಯ ಹೊಂದಿದಂತೆ ಸಹಕಾರಿ ಕ್ಷೇತ್ರಕ್ಕೂ ಮೇಲ್ಮನೆಯಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನಾದರೂ ನೀಡಿ ಸಹಕಾರಿ ಕ್ಷೇತ್ರಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿದರು.
ಇಂದಿರಾ ದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ಬಿ ಉಮ್ಮರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು ಇದರ ನಿರ್ದೇಶಕ ಪದ್ಮನಾಭ ರೈ ಕಲ್ಲಡ್ಕ, ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ ಅಶ್ವನಿ ಕುಮಾರ್ ರೈ, ಜಿ ಪಂ ಮಾಜಿ ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್, ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ ಬಳ್ಳಾಲ್, ಪ್ರಮುಖರಾದ ಗೋವಿಂದ ಭಟ್, ಟಿ ಗಣೇಶ್ ರಾವ್, ಜಿ ಎಂ ಇಬ್ರಾಹಿಂ, ಉಮ್ಮರ್, ಕೆ ಅಶ್ರಫ್, ಎಸ್ ಹರೀಶ್ ಐತಾಳ್, ಶ್ರೀಮತಿ ಕವಿತಾ ಎ ಸಿ, ಶ್ರೀಧರ್ ಕೋಟ್ಯಾನ್, ಸಂಜೀವ ಪೂಜಾರಿ, ಬಿ ಎಂ ಅಬ್ಬಾಸ್ ಅಲಿ, ಕೇಶವ ರಾವ್ ಎನ್, ಮೋಹನ್ ನಾಯಕ್, ಮುತ್ತಯ್ಯ ಮರಾಠಿ, ಮನೋಹರ್ ಶೆಟ್ಟಿ, ಹಾಜಿ ಮೊಯಿದಿನಬ್ಬ ಕೆ, ಮೋಹನದಾಸ ಶೆಟ್ಟಿ ಪುದ್ದೊಟ್ಟು, ಅಬೂಬಕ್ಕರ್ ಅಮ್ಮುಂಜೆ, ವಿಠಲ ಪ್ರಭು ಪತ್ತುಮುಡಿ, ಸೂರ್ಯಕಿರಣ್ ಆಚಾರ್ ಮಿತ್ತಾಳ, ಜಗದೀಶ್ ನಾಯಕ್ ಸುಳ್ಯ, ಜೆಫ್ರಿ ಲೂಯಿಸ್ ಕುಕ್ಕಾಜೆ, ಮುಹಮ್ಮದ್ ನಜೀಬ್ ಕಾಪಿಕಾಡು, ವೆಂಕಟರಾಜ್, ವಿಠಲ ರೈ ಬಾಲಾಜಿಬೈಲು, ಕೆ ಶಿವಶಂಕರ ರಾವ್, ಸುಬ್ರಹ್ಮಣ್ಯ ಕಾಡುಮಠ, ಶ್ರೀಮತಿ ದೇವಕಿ ಎಚ್, ರಾಮಕಿಶೋರ್ ಕಜೆ, ಯೋಗೀಶ್ ಎಚ್, ಉಮಾನಾಥ ರೈ ಮೇರಾವು, ರಮಾನಾಥ ವಿಟ್ಲ, ಉದಯಕುಮಾರ್ ಭಟ್ ಖಂಡಿಗ, ಚಾರ್ಲಿ ಡಿಸೋಜ ಬಾಬುಕೋಡಿ, ರವಿ ಪೂಜಾರಿ, ಅಬ್ದುಲ್ ಜಲೀಲ್ ಮೋಂಟುಗೋಳಿ, ಆಲ್ಬರ್ಟ್ ಮೆನೇಜಸ್ ಮೊದಲಾದವರು ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ವಿಶ್ವನಾಥ ನಾಯ್ಕ ನಿರ್ಬೈಲು, ಸುಧಾಕರ ರೈ ನಾಡಾಜೆ, ಅಬ್ದುಲ್ ರಹಿಮಾನ್ ಸಂಪಿಲ, ತುಳಸಿ ಪುರಂದರ ಕೆಂಜಿಲ, ವೆಂಕಟೇಶ್ ಪ್ರತಾಪ್ ಪತ್ತುಮುಡಿ, ಬದ್ರುದ್ದೀನ್ ಕೈಯೂರು, ಅಬ್ದುಲ್ ಹಮೀದ್ ನಾಡಾಜೆ, ಜಗದೀಶ್ ನಾಯಕ್, ದಿನೇಶ್ ಮೂಳೂರು, ರವೀಂದ್ರ ಶೆಟ್ಟಿ ಕುಕ್ಕಾಜೆ, ಫಿಲೋಮಿನಾ ಡಿಸೋಜ ಬಾಬುಕೋಡಿ, ಮೋಂತು ಆಲ್ಬುಕರ್ಕ್, ಹಾರಿಸ್ ಕುಕ್ಕಾಜೆ, ಮಾರ್ಶಲ್ ಡಿ ಸೋಜ ಎರ್ಮಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಮತಾ ಎನ್, ಬಂಗಾರ ತಪಾಸಕ ಮೋಹನ್ ಆಚಾರ್ಯ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಚಂದ್ರಹಾಸ ಕರ್ಕೇರಾ ಪ್ರಸ್ತಾವನೆಗೈದರು. ಸಂಘದ ನಿರ್ದೇಶಕ ದಿವಾಕರ ನಾಯಕ್ ಕುಂಟೂರು ವಂದಿಸಿ, ಶಿಕ್ಷಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

































0 comments:
Post a Comment