ಅತೀ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಸಿಎಂ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯ ಪಾತ್ರ
ಮಂಗಳೂರು, ಜನವರಿ 05, 2026 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 6 ರ ನಂತರ ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ದಾಖಲೆ ಸೃಷ್ಟಿಸುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಮುಖ್ಯಮಂತ್ರಿಗಳನ್ನು ಹಸಿದವರ ಪಾಲಿನ “ಅನ್ನದಾತ”, ಬಡವರ ಪಾಲಿನ “ಭಾಗ್ಯದಾತ” ಎಂದು ಬಣ್ಣಿಸಿದ್ದಾರೆ.
2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ “ಅನ್ನಭಾಗ್ಯ” ಯೋಜನೆ ಜಾರಿ ಮಾಡಿ ಹಸಿದವರ ಪಾಲಿನ ಅನ್ನದಾತರಾಗಿ, ನಂತರ ಹಲವು ಭಾಗ್ಯಗಳನ್ನು ಜಾರಿಗೆ ತರುವ ಮೂಲಕ ಬಡವರ ಪಾಲಿನ ಭಾಗ್ಯದಾತ ಎನಿಸಿಕೊಂಡಿದ್ದಾರೆ.
ಇಂದಿಗೂ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಜನತೆಯ ಒಳಿತನ್ನೇ ಉಸಿರಾಗಿಸಿಕೊಂಡಿರುವ ಸಿದ್ದರಾಮಯ್ಯ ಅವರು ತಮ್ಮ ಮಾತೃ ಹೃದಯದಿಂದ ಬಡ ಜನತೆಯ ಮೇಲೆ ಮಮತೆಯ ಮಹಾಪೂರವನ್ನೇ ಹರಿಸಿದ ನಾಯಕರು ಎಂದಿದ್ದಾರೆ.
ತನ್ನ ರಾಜಕೀಯ ಅವಧಿಯಲ್ಲಿ ತನ್ನ ಸಿದ್ಧಾಂತಗಳನ್ನು ಎಂದಿಗೂ ರಾಜಿ ಮಾಡಿಕೊಳ್ಳದ ಸಿದ್ದರಾಮಯ್ಯ ಅವರು “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎನ್ನುವ ತತ್ವವನ್ನು ಸಾರಿ, ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ದೃಢ ಸಂಕಲ್ಪ ಮಾಡಿದ ರಾಜ್ಯ ಕಂಡ ಅಪರೂಪದ ರಾಜಕಾರಣಿ ಸಿದ್ದರಾಮಯ್ಯ ಅವರಾಗಿದ್ದಾರೆ ಎಂದು ಸಲೀಂ ಅಹ್ಮದ್ ಕೊಂಡಾಡಿದ್ದಾರೆ.


















0 comments:
Post a Comment