ಮಂಗಳೂರು, ಜನವರಿ 05, 2026 (ಕರಾವಳಿ ಟೈಮ್ಸ್) : ಮನಪಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 43ರ ಕುದ್ರೋಳಿ ಕಂಡತ್ತಪಳ್ಳಿಯಲ್ಲಿ ಸುಮಾರು 16.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, 2022-23ನೇ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯು ಮಂಜೂರಾಗಿದ್ದು ಇದೀಗ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ. ಅಂಗನವಾಡಿ ಕೇಂದ್ರಗಳು ಈ ದೇಶದ ಭವಿಷ್ಯವಾಗಿರುವ ಮುಂದಿನ ಪೀಳಿಗೆಯನ್ನು ಉತ್ತಮ ಪ್ರಜೆಯನ್ನಾಗಿಸುವ ಮೊದಲ ಹಂತದ ಜ್ಞಾನ ದೇಗುಲಗಳು. ಇಲ್ಲಿ ಕಲಿಯುವ ಮಕ್ಳಳು ಮುಂದೆ ಈ ದೇಶದ ಭವಿಷ್ಯವನ್ನು ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಅರ್ಷಾದ್ ಪೆÇೀಪಿ, ಮಾಜಿ ಕಾಪೆರ್Çೀರೇಟರ್ ಗಳಾದ ಶಂಸುದ್ದಿನ್, ಅಝೀಝ್ ಕುದ್ರೋಳಿ, ಪ್ರಮುಖರಾದ ದಿನೇಶ್ ಕಾಮತ್, ಅಮರ್ ಸುವರ್ಣ, ಕಬೀರ್ ಬಂದರ್, ಅಂಗನವಾಡಿ ಕೇಂದ್ರದ ಸಿಬ್ಬಂದಿಗಳು, ವಿವಿಧ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.




















0 comments:
Post a Comment