ಬಂಟ್ವಾಳ, ಜನವರಿ 22, 2026 (ಕರಾವಳಿ ಟೈಮ್ಸ್) : ಸಜಿಪನಡು ರಿಯಾಳುಲ್ ಇಸ್ಲಾಂ ದಫ್ ಕಮಿಟಿಯ 50ನೇ ವಾರ್ಷಿಕೋತ್ಸವದ ಪ್ರಯುಕ್ತ ವಾರ್ಷಿಕ ರಿಫಾಯಿ ರಾತೀಬ್ ಮಜ್ಲಿಸ್, ಬುರ್‍ದಾ ಹಾಗೂ ಇಷ್ಕ್ ಮಜ್ಲಿಸ್, ಖತಮುಲ್ ಕುರ್-ಆನ್ ಮಜ್ಲಿಸ್, ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ ಸಮಾರಂಭ ಹಾಗೂ 4 ದಿನಗಳ ಧಾರ್ಮಿಕ ಮತ ಪ್ರಭಾಷಣ ಮೊದಲಾದ ಕಾರ್ಯಕ್ರಮಗಳು ಜನವರಿ 22 ರಿಂದ 25ರವರೆಗೆ ಸಜಿಪನಡು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿರುವ ಮರ್‍ಹೂಂ ಶೈಖುನಾ ಸಜಿಪ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಜನವರಿ 22 ರಂದು ಗರುವಾರ ರಾತ್ರಿ ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಎಸ್ ಎಚ್ ಹೈದರ್ ದಾರಿಮಿ ಅಲ್-ಮುರ್ಶಿದಿ ದುವಾ ನೆರವೇರಿಸಲಿದ್ದು, ಸಜಿಪನಡು ಮುಹಿಯುದ್ದೀನ್ ಜುಮಾ ಮಸೀದಿ ಇಮಾಂ ಅಬ್ದುಲ್ಲತೀಫ್ ನಿಝಾಮಿ ಉದ್ಘಾಟಿಸಲಿದ್ದು, ಉಪ್ಪಿನಂಗಡಿ ಖತೀಬ್ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ್ ಮುಖ್ಯ ಭಾಷಣಗೈಯುವರು. ಜನವರಿ 23 ರಂದು ಶುಕ್ರವಾರ ರಾತ್ರಿ ಕೆ ಐ ಅಬ್ದುಲ್ ಖಾದಿರ್ ಕುಕ್ಕಿಲ ಮುಖ್ಯ ಭಾಷಣಗೈಯುವರು.
ಜನವರಿ 24 ರಂದು ಶನಿವಾರ ರಾತ್ರಿ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ “ತಂಬೀಹ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಫರೀದ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಜಿಪನಡು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಹಾಜಿ ಅಧ್ಯಕ್ಷತೆ ವಹಿಸುವರು. ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಎಸ್ ಎಚ್ ಹೈದರ್ ದಾರಿಮಿ ಅಲ್-ಮುರ್ಶಿದಿ ಉದ್ಘಾಟಿಸುವರು. ಚೊಕ್ಕಬೆಟ್ಟು ಮಸೀದಿ ಖತೀಬ್ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಸಂದೇಶ ಭಾಷಣಗೈಯುವರು.
ಜನವರಿ 25 ರಂದು ಬೆಳಿಗ್ಗೆ 9 ಗಂಟೆಗೆ ಊರಿನ ಅಗಲಿದ ಪ್ರತಿಯೊಬ್ಬರ ಹಾಗೂ ಸಮಸ್ತ ನೇತರಾರರ ಅನುಸ್ಮರಣೆ ಹಾಗೂ ಖತಮುಲ್ ಕುರ್-ಆನ್ ಮಜ್ಲಿಸ್, ಅಸರ್ ನಮಾಝ್ ಬಳಿಕ ವಾರ್ಷಿಕ ರಿಫಾಯಿ ರಾತೀಬ್ ಮಜ್ಲಿಸ್, ಮಗ್ರಿಬ್ ಬಳಿಕ ಸಂದಲ್ ಮೆರವಣಿಗೆ, ದಫ್ ಹಾಗೂ ತಾಲೀಮು ಪ್ರದರ್ಶನ ನಡೆಯಲಿದೆ.
ಸಯ್ಯಿದ್ ಇಬ್ರಾಹಿಂ ಬಾತಿಷ್ ತಂಙಳ್ ಆನೆಕಲ್ ದುವಾಶೀರ್ವಚನಗೈಯಲಿದ್ದು, ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಶೈಖ್ ಮುಹಮ್ಮದ್ ಫಾಹಿಮ್ ನೇತೃತ್ವದ ಅಲ್-ಮುನೀರ್ ಮೆಹಫಿಲೇ ಇಷ್ಕ್ ತಂಡದಿಂದ ಬುರ್‍ದಾ ಹಾಗೂ ಇಷ್ಕ್ ಮಜ್ಲಿಸ್ ನಡೆಯಲಿದೆ ಎಂದು ರಿಯಾಳುಲ್ ಇಸ್ಲಾಂ ದಫ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ಚಾಬುವಾಕ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್ ಇಬ್ರಾಹಿಂ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













0 comments:
Post a Comment