ಬಂಟ್ವಾಳ, ಜನವರಿ 17, 2026 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ಇಂದಿರಾ ನಗರದ ಶ್ರೀ ಭದ್ರಕಾಳಿ ದೇವಸ್ಥಾನದ ಸಂಪರ್ಕ ರಸ್ತೆಗೆ 50 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣ ಹಾಗೂ ದಾಸರಗುಡ್ಡೆ ಶ್ರೀ ಕೊರಗಜ್ಜ ಸಾನಿಧ್ಯದ ಸಂಪರ್ಕ ರಸ್ತೆಗೆ 10 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರಿಟೀಕರಣಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆಯ ಕಾಂಕ್ರೀಟಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ವೇಳೆ ಗ್ರಾಮದ ಜನರ ಸಹಕಾರವಿದ್ದರೆ ಗುಣಮಟ್ಟದ ಉತ್ತಮ ರಸ್ತೆ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್, ಸಾನಿಧ್ಯದ ಪ್ರಧಾನ ಸಂತೋಷ್ ಕೋಟ್ಯಾನ್, ಸಜಿಪಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಸುಮತಿ ಖಂಡಿಗ, ಗ್ರಾ ಪಂ ಸದಸ್ಯರುಗಳು, ಸಜಿಪಮೂಡ ಗ್ರಾ ಪಂ ಮಾಜಿ ಅಧ್ಯಕ್ಷ ಶೋಬಿತ್ ಪೂಂಜಾ, ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ ಸಂಕೇಶ, ರವೀಂದ್ರ ಕಂಬಳಿ, ಪ್ರವೀಣ್ ಗಟ್ಟಿ, ದೇವಪ್ಪ ಪೂಜಾರಿ, ರೂಪೇಶ್ ಆಚಾರ್ಯ, ನವೀನ್ ಅಂಚನ್, ಪ್ರವೀಣ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.



















0 comments:
Post a Comment