ಬಂಟ್ವಾಳ, ಜನವರಿ 06, 2026 (ಕರಾವಳಿ ಟೈಮ್ಸ್) : ಕಾರೊಂದು ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಗ್ರಾಮದ ಬಾಯ್ತಾರು ಸೇತುವೆ ಬಳಿ ಡಿ 4 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ಜೈನುದ್ದೀನ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಚಾಲಕನ ನಿಯಂತ್ರಣ ಮೀರಿ ಸೇತುವೆ ಮೇಲಿಂದ ಹೊಳೆಗೆ ಬಿದ್ದಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಮಹಮ್ಮದ್ ಶಾಕೀರ್ ಬಿ ಎಂಬವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment