ಬಂಟ್ವಾಳ, ಜನವರಿ 06, 2026 (ಕರಾವಳಿ ಟೈಮ್ಸ್) : ತಾಲೂಕಿನ ಆಲದಪದವು ಅಕ್ಷರ ಭಾರತಿ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ “ಅಕ್ಷರ ಉತ್ಸವ” ಇತ್ತೀಚೆಗೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕ್ರತಿಯ ಪಾಠದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುತ್ತಿರುವ ಇಂತಹ ಶಾಲೆಗಳ ಅಭಿವೃದ್ಧಿಗೆ ನಾವೆಲ್ಲರೂ ಪೆÇ್ರೀತ್ಸಾಹ ನೀಡಬೇಕಾಗಿದೆ ಎಂದರು.
ಶಾಲಾ ಸಂಚಾಲಕ ಮೋಹನ್ ರೈ ಕೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಉದ್ಯಮಿ ಸುನಿಲ್ ಶ್ರೀಧರನ್, ಬೆಂಗಳೂರಿನ ಹೈಕೋರ್ಟು ನ್ಯಾಯವಾದಿ, ಅಂತರರಾಷ್ಟ್ರೀಯ ಈಜು ಪಟು ಸಂಧ್ಯಾ ಪ್ರಭು, ಮಂಗಳೂರಿನ ನೋಟರಿ-ನ್ಯಾಯವಾದಿ ರಾಘವೇಂದ್ರ ರಾವ್, ಮೈಸೂರಿನ ಡಾ ಉಲ್ಲಾಸ್, ಪತ್ರಕರ್ತ-ರಂಗನಿರ್ದೇಶಕ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ಪೆÇೀಷಕರಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿ ಪಂ ಮಾಜಿ ಸದಸ್ಯ ಎಂ ತುಂಗಪ್ಪ ಬಂಗೇರ, ಉದ್ಯಮಿ ಟಿ ಹರೀಂದ್ರ ಪೈ, ಪ್ರಗತಿಪರ ಕೃಷಿಕ ಅಮ್ಮು ರೈ ಹರ್ಕಾಡಿ, ಉದ್ಯಮಿ ಪ್ರೀತಮ್ ಶೆಟ್ಟಿ ದಂಡೆಗೋಳಿ, ಶ್ರೀ ಕಾರೀಂಜೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗೋಪಾಲ ಶೆಟ್ಟಿ, ಪೆÇೀಷಕ ಸಂಘದ ಅಧ್ಯಕ್ಷ ಅರುಣ್ ಐತಾಳ್, ಶ್ರೀ ಹರಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಭಾರತಿ ಎಸ್ ರೈ, ಶಾಲಾ ನಾಯಕಿ ಧನ್ವಿ ಶೆಟ್ಟಿ, ಪೆÇೀಷಕರಾದ ಶಂಕರ ಆಚಾರ್ಯ ಕೊರಗಟ್ಟೆ, ಶೈಲೇಂದ್ರ ಜೈನ್, ದಿನಕರ ಸಾಲ್ಯಾನ್, ಉದ್ಯಮಿಗಳಾದ ತುಕಾರಾಂ ಗೌಡ, ಪ್ರಕಾಶ್ ಗಟ್ಟಿ ಮೊದಲಾದವರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಮೋಹನ್ ಎಚ್ ವರದಿ ವಾಚಿಸಿದರು. ಶಿಕ್ಷಕ ಸುಕೇಶ್ ಕೆ ಸ್ವಾಗತಿಸಿ, ಶಿಕ್ಷಕಿ ಮೆಲ್ವಿನಾ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವೈವಿದ್ಯಮಯ ನೃತ್ಯಗಳು, ಪ್ರಹಸನ, ನಾಟಕ, ಯಕ್ಷಗಾನ ನಡೆಯಿತು.


















0 comments:
Post a Comment