ಮಂಗಳೂರು, ಜನವರಿ 30, 2026 (ಕರಾವಳಿ ಟೈಮ್ಸ್) : ಬಿಜೈ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಹಿರಿಯ ಮಹಿಳೆಯರ ಚಿನ್ನಾಭರಣ ಹಾಗೂ ನಗದು ಕಳವುಗೈದ ಪ್ರಕರಣ ಬೇಧಿಸಿದ ಬರ್ಕೆ ಪೊಲೀಸರು ಚಿನ್ನಾಭರಣ, ನಗದು ಸಹಿತ ಅಂತರ್ ರಾಜ್ಯ ಚೋರನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ಮಡಿಕೇರಿ ತ್ಯಾಗರಾಜ್ ಕಾಲೊನಿ, ದಾಸವಾಳ ರಸ್ತೆಯ ಗಫರ್ ಬಿಲ್ಡಿಂಗ್ ನಿವಾಸಿ ದಿವಂಗತ ಎಂ ಕೆ ನಜೀರ್ ಎಂಬವರ ಪುತ್ರ ಮಹಮ್ಮದ್ ಇಮ್ರಾನ್ ಎನ್ ಎಂ (44) ಎಂದು ಹೆಸರಿಸಲಾಗಿದೆ.
ಬರ್ಕೆ ಪೆÇಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಜನವರಿ 23 ರಂದು ಸಂಜೆ 7 ಗಂಟೆ ವೇಳೆಗೆ ಪ್ರಾಯಸ್ಥ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ರೂಪಾಯಿ ನಗದು ಹಣ ಇರುವ ಟ್ರಾಲಿ ಬ್ಯಾಗ್ ಇಟ್ಟು ಕುಳಿತುಕೊಂಡಿದ್ದ ವೇಳೆ ಚಿನ್ನಾಭರಣಗಳಿರುವ ಬ್ಯಾಗ್ ಕಳವು ಮಾಡಿಕೊಂಡ ಬಗ್ಗೆ ಬರ್ಕೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಕೇಂದ್ರ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ಪಿಎಸ್ಸೈ ವಿನಾಯಕ ತೊರಗಲ್ ಹಾಗೂ ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ, ಸಿದ್ದು, ಹರೀಶ್, ನಿತೀಶ್, ಗಾಲಿಬ್ ಅವರನ್ನೊಳಗೊಂಡ ತಂಡ ಕಳವು ಪ್ರಕರಣಗಳಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಚೋರ ಆರೋಪಿ ಮಹಮ್ಮದ್ ಇಮ್ರಾನ್ ಎಂಬಾತನನ್ನು ಜನವರಿ 28 ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿಯಲ್ಲಿ ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯಿಂದ 6,47,920/- ರೂಪಾಯಿ ಬೆಲೆ ಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 5 ಸಾವಿರ ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಜನವರಿ 29 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯು ಬಸ್ಸು ನಿಲ್ದಾಣಗಳಲ್ಲಿ ಬೆಲೆ ಬಾಳುವ ಸೊತ್ತುಗಳಿರುವ ಬ್ಯಾಗುಗಳನ್ನು ಕಳ್ಳತನ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದು, ಈತನ ಮೇಲೆ ಒಟ್ಟು 11 ಪ್ರಕರಣಗಳು ದಾಖಲಾಗಿದೆ. ಈತನ ಮೇಲೆ ದುದ್ದ ಪೆÇಲೀಸ್ ಠಾಣೆಯಲ್ಲಿ 1, ಕೊಮನೂರು ಪೆÇಲೀಸ್ ಠಾಣೆಯಲ್ಲಿ 1, ಹಾಸನ ಬಡಾವಣೆ ಪೆÇಲೀಸ್ ಠಾಣೆಯಲ್ಲಿ 1, ಹಾಸನ ನಗರ ಪೆÇಲೀಸ್ ಠಾಣೆಯಲ್ಲಿ 1, ಚೆನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ 1, ಮೈಸೂರು ದೇವರಾಜ ನಗರ ಪೆÇಲೀಸ್ ಠಾಣೆಯಲ್ಲಿ 1 ಬ್ಯಾಗ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಹಾಸನ ಜಿಲ್ಲೆ ಶಾಂತಿಗ್ರಾಮ ಪೆÇಲೀಸ್ ಠಾಣೆಯಲ್ಲಿ 1, ಹಾಸನ ಬಡಾವಣೆ ಪೆÇಲೀಸ್ ಠಾಣೆಯಲ್ಲಿ 2, ಹಾಸನ ಜಿಲ್ಲೆ ದುದ್ದ ಪೆÇಲೀಸ್ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ದಾಖಲಾಗಿದೆ. ಅಲ್ಲದೇ ಈತ ಹಾಸನ ಜಿಲ್ಲೆಯ ಮನೆ ಕಳವು ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಳಿಕ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯವು ಈತನ ವಿರುದ್ದ ವಾರೆಂಟ್ ಕೂಡಾ ಹೊರಡಿಸಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.















0 comments:
Post a Comment