ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ಮನೆಯ ಎದುರು ಶೇಖರಿಸಿಟ್ಟಿದ್ದ ಅಡಿಕೆ ಕಳವುಗೈದ ಘಟನೆ ವಿಟ್ಲ ಕಸಬಾ ಗ್ರಾಮದಲ್ಲಿ ಜನವರಿ 13 ರಂದು ಮುಂಜಾನೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಸಂಜೀವ ಪೂಜಾರಿ (75) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ತೋಟದಿಂದ ತೆಗೆದ ಅಡಿಕೆಯನ್ನು ಮನೆಯ ಅಂಗಳದಲ್ಲಿ ಒಣಗಿಸಲು ಹಾಕಿದ್ದು, ಜನವರಿ 10ರಂದು ಮಳೆ ಬರುವ ಸಂಭವ ಇದ್ದುದರಿಂದ ಅಡಿಕೆಯನ್ನು ಸುಮಾರು 10 ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿ ಮನೆಯ ಎದುರಿನ ಸಿಮೆಂಟ್ ಶೀಟಿನ ಕೆಳಗೆ ಶೇಖರಿಸಿಟ್ಟಿದ್ದರು.
ಜನವರಿ 12 ರಂದು ರಾತ್ರಿ 12 ಗಂಟೆಯಿಂದ ಜ 13 ರ ಮುಂಜಾನೆ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಅಡಿಕೆ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳವಾದ 10 ಪ್ಲಾಸ್ಟಿಕ್ ಗೋಣಿ ಚೀಲ ಒಣ ಅಡಿಕೆ ಮೌಲ್ಯ ಸುಮಾರು 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment