ಬೆಳ್ತಂಗಡಿ, ಜನವರಿ 14, 2026 (ಕರಾವಳಿ ಟೈಮ್ಸ್) : ದೇವಸ್ಥಾನಕ್ಕೆಂದು ತೆರಳಿದ್ದ ಬಾಲಕನ ಮೃತದೇಹ ಮನೆ ಸಮೀಪದ ತೋಟವೊಂದರ ಕೆರೆಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಎಂಬಲ್ಲಿ ಜನವರಿ 14 ರಂದು ವರದಿಯಾಗಿದೆ.
ಮೃತ ಬಾಲಕನನ್ನು ಗೇರುಕಟ್ಟೆ ನಿವಾಸಿ ಸುಮಂತ್ (15) ಎಂದು ಹೆಸರಿಸಲಾಗಿದೆ. ಬಾಲಕ ಸುಮಂತ್ ವಾರಕ್ಕೊಮ್ಮೆ ಬೆಳ್ಳಂ ಬೆಳಗ್ಗೆ ದೇವಸ್ಥಾನಕ್ಕೆ ಹೋಗುವ ಅಭ್ಯಾಸವಿದ್ದು ಅದೇ ರೀತಿ ಜನವರಿ 14 ರಂದು ಕೂಡಾ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ತೆರಳಿದ್ದು ವಾಪಸ್ ಮನೆಗೆ ಬರದೇ ಇದ್ದಾಗ ಈತನ ಬಗ್ಗೆ ಹುಡುಕಾಟ ನಡೆಸಿದಾಗ ಮನೆಯಿಂದ 500 ಮೀಟರ್ ದೂರದಲ್ಲಿರುವ ಬಾವಿಯಲ್ಲಿ ಆತನ ಶವ ಪತ್ತೆಯಾಗಿದೆ.
ಮೃತದೇಹದ ಮೇಲೆ ಕೆಲವು ಗಾಯಗಳಿದ್ದು, ಆ ಗಾಯಗಳು ಹೇಗೆ ಉಂಟಾಗಿವೆ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.












0 comments:
Post a Comment