ಮಂಗಳೂರು, ಜನವರಿ 14, 2026 (ಕರಾವಳಿ ಟೈಮ್ಸ್) : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕಗೆ ಬಾಂಗ್ಲಾ ನಿವಾಸಿಯೆಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಕೂಳೂರು ನಿವಾಸಿ ನಾರಾಯಣ ಅವರ ಪುತ್ರ ಮೋಹನ (37) ಎಂದು ಹೆಸರಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೂಳೂರು ನಾರಾಯಣ ಗುರು ಭಜನಾ ಮಂದಿರ ಬಳಿಯ ರಾಮಣ್ಣ ಜ್ಯೋಗಿ ಕಂಪೌಂಡ್ ನಿವಾಸಿ ರಾಮ್ ದಾಸ್ ಎಂಬವರ ಪುತ್ರ ರತೀಶ್ ದಾಸ್ (32), ಕೂಳೂರು ನಾರಾಯಣ ಗುರು ಭಜನಾ ಮಂದಿರ ಬಳಿ ನಿವಾಸಿ ಶ್ರೀನಿವಾಸ ಎಂಬವರ ಪುತ್ರ ಧನುಷ್ (24) ಹಾಗೂ ಕೂಳೂರು ರಾಯರಕಟ್ಟೆ ಪ್ರೈಮ್ ಕಂಪೌಂಡ್ ನಿವಾಸಿ ಸುರೇಶ್ ಎಂಬವರ ಪುತ್ರ ಸಾಗರ್ (24) ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಜನವರಿ 11 ರಂದು ಸಂಜೆ 6.05ಕ್ಕೆ 4 ಜನ ಆರೋಪಿಗಳು ವ್ಯಕ್ತಿಯನ್ನು ತಡೆದು ನಿಲ್ಲಿಸಿ ನೀನು ಹಿಂದೂನಾ ಮುಸ್ಲಿಂನಾ ಎಂದು ಜೋರು ಮಾಡಿ ನೀನು ಬಾಂಗ್ಲಾ ದೇಶದವನು ಬೆವರ್ಸಿ ರಂಡೆ ಮಗ ಎಂದು ಅವಾಚ್ಯ ಶಬ್ದಗಳಿಂದ ಬೈದು ಸಾರಣಿ ಮಾಡುವ ಕರಣಿ (ತಾಪಿ) ಯಿಂದ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ ಬಗ್ಗೆ ಜನವರಿ 12 ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 03/2026 ಕಲಂ 126(2), 352, 351(3), 353, 109, 118(1) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ-2023 ರಂತೆ ಪ್ರಕರಣ ದಾಖಲಾಗಿತ್ತು.












0 comments:
Post a Comment