ಬಂಟ್ವಾಳ, ಜನವರಿ 25, 2026 (ಕರಾವಳಿ ಟೈಮ್ಸ್) : ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ ಬೇಧಿಸಿದ ವಿಟ್ಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಕೊಳ್ನಾಡು ಗ್ರಾಮದ ಬೊಲ್ಪಾದೆ ಎಂಬಲ್ಲಿ ಜನವರಿ 23 ರಂದು ನಡೆದಿದೆ.
ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಅವರು ಜನವರಿ 23 ರಂದು ಸಂಜೆ ಕೊಳ್ನಾಡು ಗ್ರಾಮದ ಬೊಲ್ಪಾದೆ ಎಂಬಲ್ಲಿ ಕುಡ್ತಮುಗೇರು ಕಡೆಗೆ ಬರುತ್ತಿದ್ದ ಕೆಎ 70 7699 ನೋಂದಣಿ ಸಂಖ್ಯೆಯ ಲಾರಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಕಲ್ಲು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಲಾರಿ ಮಾಲಕ ಇರ್ಶಾದ್ ಹಾಗೂ ಚಾಲಕ ಅಬ್ದುಲ್ ಶರೀಫ್ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, 15 ಲಕ್ಷ ರೂಪಾಯಿ ಮೌಲ್ಯದ ಲಾರಿ ಸಹಿತ ಮೂರು ಸಾವಿರ ರೂಪಾಯಿ ಮೌಲ್ಯದ 250 ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿನ ಹಳೆ ಪಾಳು ಬಿದ್ದ ಕೋರೆ ಪಕ್ಕದಲ್ಲಿದ್ದ ಕಲ್ಲುಗಳನ್ನು ಯಾರೂ ಇಲ್ಲದ ವೇಳೆ ಅಕ್ರಮವಾಗಿ ಲಾರಿಗೆ ತುಂಬಿಸಿಕೊಂಡು ಬರಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
























0 comments:
Post a Comment