ಬಂಟ್ವಾಳ, ಜನವರಿ 25, 2026 (ಕರಾವಳಿ ಟೈಮ್ಸ್) : ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಕೇಪು ಗ್ರಾಮದ ನೀರ್ಕಜೆ ಎಂಬಲ್ಲಿ ಜನವರಿ 23 ರಂದು ಸಂಭವಿಸಿದೆ. ಗಾಯಾಳುಗಳನ್ನು ಪುಣಚ ಗ್ರಾಮದ ಕೃಷ್ಣ ನಾಯ್ಕ್ (44) ಹಾಗೂ ಅವರ ಮಕ್ಕಳಾದ ಚಿಂತನಾ, ಧೃತಿ ಎ ಕೆ ಎಂದು ಹೆಸರಿಸಲಾಗಿದೆ.
ಕೃಷ್ಣ ನಾಯ್ಕ್ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ರಮೇಶ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಗಾಯಗೊಂಡ ಮೂವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























0 comments:
Post a Comment