ಬಂಟ್ವಾಳ, ಫೆಬ್ರವರಿ 21, 2026 (ಕರಾವಳಿ ಟೈಮ್ಸ್) : ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ವ್ಯಕ್ತಿಯೋರ್ವರು ಕುಸಿದು ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮ ಬಸವನಗುಡಿ ಎಂಬಲ್ಲಿ ಫೆ 20 ರಂದು ಸಂಭವಿಸಿದೆ.
ಮೃತರನ್ನು ಇಲ್ಲಿನ ನಿವಾಸಿ ಶಿವಕುಮಾರ್ ಎಂದು ಹೆಸರಿಸಲಾಗಿದೆ. ಇವರು ಫೆ 20 ರಂದು ಮಧ್ಯಾಹ್ನ 2 ಗಂಟೆಗೆ ಮನೆಯ ಹಾಲ್ ನಲ್ಲಿ ಕುಳಿತುಕೊಂಡಿರುವಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೃದಯಾಘಾತ ಅಥವಾ ಇನ್ಯಾವುದೋ ಖಾಯಿಲೆಯಿಂದ ಅಸ್ವಸ್ಥಗೊಂಡು ಕುಸಿದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೇಬಿಕಲಾ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.















0 comments:
Post a Comment