ಜೋಕಟ್ಟೆಯಲ್ಲಿ ಪಣಂಬೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : 22 ಕೆಜಿ ಗಾಂಜಾ ಸಹತ ನಾಲ್ವರು ಖದೀಮರು ಅಂದರ್ - Karavali Times ಜೋಕಟ್ಟೆಯಲ್ಲಿ ಪಣಂಬೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : 22 ಕೆಜಿ ಗಾಂಜಾ ಸಹತ ನಾಲ್ವರು ಖದೀಮರು ಅಂದರ್ - Karavali Times

728x90

21 February 2026

ಜೋಕಟ್ಟೆಯಲ್ಲಿ ಪಣಂಬೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : 22 ಕೆಜಿ ಗಾಂಜಾ ಸಹತ ನಾಲ್ವರು ಖದೀಮರು ಅಂದರ್

ಮಂಗಳೂರು, ಫೆಬ್ರವರಿ 21, 2026 (ಕರಾವಳಿ ಟೈಮ್ಸ್) : ಗಾಂಜಾ ಮಾರಾಟ ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು ನಾಲ್ವರು ಖದೀಮರನ್ನು ಬಂಧಿಸಿದ ಘಟನೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಹ್ತತಿರ ಫೆ 21 ರಂದು ನಡೆದಿದೆ. 

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಜಲಗಾಂ ಜಿಲ್ಲೆಯ, ಚೊಪ್ಪಡ ತಾಲೂಕು, ಸಮತಾ ನಗರ ನಿವಾಸಿ ಬಾಬು ರಾಂ ನೀಲಕಂಠ ಜಾದವ್ ಅವರ ಪುತ್ರ ಕರಣ್ ಬಾಬು ರಾಂ ಜಾದವ್ (27), ಮಧ್ಯಪ್ರದೇಶ ರಾಜ್ಯದ ದೇವಾಸ್ ಜಿಲ್ಲೆಯ, ಚಪಡ ತಾಶಿಲ್ ಬಗಳಿ ನಿವಾಸಿ ಮುನ್ಶಿ ಶಾ ಎಂಬವರ ಪುತ್ರ ಸಮೀರ್ ಶಾ (19), ಉಡುಪಿ ಜಿಲ್ಲೆಯ, ಹೆಜಮಾಡಿ ಗ್ರಾಮದ ಹೆಜಮಾಡಿಕೋಡಿ ನ್ಯೂ ಹೌಸ್ ನಿವಾಸಿ ಎಂ ಹಸನ್ ಬ್ಯಾರಿ ಅವರ ಪುತ್ರ ಎಂ ಎಚ್ ಮಯ್ಯದ್ದಿ (48) ಹಾಗೂ ಮೂಲತಃ ಮಂಗಳೂರು-ಕುದ್ರೋಳಿ ನಡುಪಳ್ಳಿ ಮಸೀದಿ ಹತ್ತಿರದ ಕರ್ಬಲ ರೋಡ್ ನಿವಾಸಿ, ಪ್ರಸ್ತುತ ಮಂಗಳೂರು-ಕಾವೂರು ರಾಜಧಾನಿ ಹೋಟೆಲ್ ಎದುರುಗಡೆ ದಿಲ್ಕುಶ್ ಎಪಾರ್ಟ್ ಮೆಂಟಿನ 1ನೇ ಮಹಡಿಯಲ್ಲಿ ವಾಸವಾಗಿರುವ ದಿವಂಗತ ಅಬ್ದುಲ್ ರಹಿಮಾನ್ ಅವರ ಪುತ್ರ ಇಬ್ರಾಹಿಂ ಖಲೀಲ್ (47) ಎಂದು ಹೆಸರಿಸಲಾಗಿದೆ. 

ಫೆ 21 ರಂದು ಪಣಂಬೂರು ಪೆÇಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯದಿಂದ ತಂದಿರುವ ಬಗ್ಗೆ ಮಾಹಿತಿ ಪಡೆದು ಉತ್ತರ ಉಪ ವಿಭಾಗದ ಎ.ಸಿ.ಪಿ. ಅವರು ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪಣಂಬೂರು ಠಾಣಾ ಪಿಎಸ್ಸೈ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತರಿಂದ 11,12,500/- ರೂಪಾಯಿ ಮೌಲ್ಯದ 22 ಕೆ.ಜಿ 250 ಗ್ರಾಂ ಗಾಂಜಾ, 18 ಸಾವಿರ ರೂಪಾಯಿ ಮೌಲ್ಯದ 6 ಮೊಬೈಲ್ ಪೆÇೀನ್ ಹಾಗೂ ಗಾಂಜಾ ಸಾಗಿಸಲು ಬಳಸಿದ 1 ಲಕ್ಷ ರೂಪಾಯಿ ಮೌಲ್ಯದ ಕೆಎ20 ಎಚ್ ಇ2915 ಹಾಗೂ ಕೆಎ19 ಎಚ್ ಪಿ 6021 ನೋಂದಣಿ ಸಂಖ್ಯೆಯ 2 ಸ್ಕೂಟರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಆರೋಪಿತರ ಪೈಕಿ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು  ಮಹಾರಾಷ್ಟ್ರ ಮಯ್ಯದಿ ಹಾಗೂ ಮಧ್ಯಪ್ರದೇಶ ಶಾರೂಕ್ ಎಂಬವರಿಂದ ಪಡೆದು ತಂದು ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ನೀಡುತ್ತಿದ್ದು, ಈ ಇಬ್ಬರು  ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು ಹಾಗೂ ಮಂಗಳೂರು ನಗರದ  ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಈ ಹಿಂದೆ ಕೂಡಾ ಹಲವು ಬಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. 

ಸದ್ರಿ ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಮೊಬೈಲ್ ಮತ್ತು ಸ್ಕೂಟರುಗಳ ಒಟ್ಟು ಮೌಲ್ಯ 12,30,500/- ರೂಪಾಯಿಗಳು. ಈ ಬಗ್ಗೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜೋಕಟ್ಟೆಯಲ್ಲಿ ಪಣಂಬೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : 22 ಕೆಜಿ ಗಾಂಜಾ ಸಹತ ನಾಲ್ವರು ಖದೀಮರು ಅಂದರ್ Rating: 5 Reviewed By: karavali Times
Scroll to Top