ಮಂಗಳೂರು, ಮಾರ್ಚ್ 23, 2026 (ಕರಾವಳಿ ಟೈಮ್ಸ್) : 2025ರ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ “ನಝೀರ ಮಂಗಳೂರು” ಎಂಬ ಫೇಸ್ ಬುಕ್ ಖಾತೆಯಿಂದ ಎಐ ತಂತ್ರಾಶದಲ್ಲಿ ತಿರುಚಿದ ವಿಡಿಯೋವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮು ದ್ವೇಷವನ್ನು ಹುಟ್ಟುಹಾಕಲು ಪ್ರಚೋದಿಸರುವ ಬಗ್ಗೆ ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 196, 353(1), 351(2) ಬಿ ಎನ್ ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
“ನಝೀರ ಮಂಗಳೂರು” ಎಂಬ ಫೇಸ್ ಬುಕ್ ಖಾತೆಯ ಬಗ್ಗೆ ವಿವರಗಳನ್ನು ಪಡೆಯಲಾಗಿದ್ದು, ಆರೋಪಿ ಬಂಟ್ವಾಳ ತಾಲೂಕು, ಬಡಗಬೆಳ್ಳೂರು ಗ್ರಾಮದ ಕುಡೆಲ್ ಎಂಬಲ್ಲಿನ ನಿವಾಸಿ ಹಮದ್ ಕೊಳ್ತಮಜಲ್ ಎಂಬವರ ಪುತ್ರ ಮಹಮ್ಮದ್ ರಫೀಕ್ (38) ಎಂಬಾತನು “ನಝೀರ ಮಂಗಳೂರು” ಖಾತೆಯಿಂದ ವಿಡಿಯೋ ಶೇರ್ ಮಾಡಿದ್ದು ದೃಢಪಟ್ಟಿದೆ.
ಆರೋಪಿಯನ್ನು ಮಾರ್ಚ್ 22 ರಂದು ಬೆಂಗಳೂರಿನಲ್ಲಿ ಕಂಕನಾಡಿ ನಗರ ಪೆÇಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.












0 comments:
Post a Comment