ದ.ಕ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಚೆಯರ್ ಮೆನ್ ಆಗಿ ಸಿ.ಎ. ಶಾಂತರಾಮ ಶೆಟ್ಟಿ 4ನೇ ಅವಧಿಗೆ ಆಯ್ಕೆ - Karavali Times ದ.ಕ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಚೆಯರ್ ಮೆನ್ ಆಗಿ ಸಿ.ಎ. ಶಾಂತರಾಮ ಶೆಟ್ಟಿ 4ನೇ ಅವಧಿಗೆ ಆಯ್ಕೆ - Karavali Times

728x90

24 March 2026

ದ.ಕ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಚೆಯರ್ ಮೆನ್ ಆಗಿ ಸಿ.ಎ. ಶಾಂತರಾಮ ಶೆಟ್ಟಿ 4ನೇ ಅವಧಿಗೆ ಆಯ್ಕೆ

ಮಂಗಳೂರು, ಮಾರ್ಚ್ 24, 2026 (ಕರಾವಳಿ ಟೈಮ್ಸ್) : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ 2026-29ನೇ ಸಾಲಿನ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ, ವೈಸ್ ಚೇರ್ಮನ್ ಆಗಿ ಡಾ. ಬಿ. ಸಚ್ಚಿದಾನಂದ ರೈ, ಖಜಾಂಜಿಯಾಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾ 24 ರಂದು ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. 

ನೂತನವಾಗಿ ಚುನಾಯಿತರಾದ ಸಿ ಎ ಶಾಂತಾರಾಮ ಶೆಟ್ಟಿ, ಡಾ. ಬಿ. ಸಚ್ಚಿದಾನಂದ ರೈ, ಗುರುದತ್  ನಾಯಕ್, ಡಾ. ಸತೀಶ್ ರಾವ್, ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ. ಸುಮನ ಬಿ., ಪಿ.ಬಿ. ಹರೀಶ್ ರೈ, ಸಚೇತ್ ಸುವರ್ಣ ಮತ್ತು  ರಾಘವೇಂದ್ರ ರಾವ್ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಚೇರ್ಮನ್ ಹಾಗೂ ವಿವಿಧ ಉಪ ಸಮಿತಿಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಸಿ ಎ ಶಾಂತಾರಾಮ ಶೆಟ್ಟಿ ಅವರು ಸತತ 4ನೇ ಅವಧಿಗೆ ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದ ಚೇರ್ಮನ್ ಆಗಿ ಆಯ್ಕೆಯಾಗಿದ್ದು, ಪ್ರಸ್ತುತ ಅವರು ನವ  ದೆಹಲಿಯ ರೆಡ್‍ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ನಿರ್ವಹಣಾ ಮಂಡಳಿ ಸದಸ್ಯರಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಚೆಯರ್ ಮೆನ್ ಆಗಿ ಸಿ.ಎ. ಶಾಂತರಾಮ ಶೆಟ್ಟಿ 4ನೇ ಅವಧಿಗೆ ಆಯ್ಕೆ Rating: 5 Reviewed By: karavali Times
Scroll to Top