ತುಂಬೆ ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿ ಕಳವು - Karavali Times ತುಂಬೆ ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿ ಕಳವು - Karavali Times

728x90

1 May 2026

ತುಂಬೆ ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿ ಕಳವು

ಬಂಟ್ವಾಳ, ಮೇ 01, 2026 (ಕರಾವಳಿ ಟೈಮ್ಸ್) : ಶಾಲಾ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ 4 ಶಾಲಾ  ಬಸ್ಸುಗಳ ಬ್ಯಾಟರಿಗಳು ಕಳವಾಗಿರುವ ಘಟನೆ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಎಪ್ರಿಲ್ 30 ರಂದು ನಡೆದಿದೆ. 

ಈ ಬಗ್ಗೆ ಕಾಲೇಜು ಅಧೀಕ್ಷಕ ಅಬ್ದುಲ್ ಕಬೀರ್ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಶಾಲೆಯ ಶಾಲಾ 4 ಬಸ್ಸುಗಳನ್ನು ಎಂದಿನಂತೆ ಶಾಲಾ ಕ್ರಿಡಾಂಗಣದ ಮರದಡಿಯಲ್ಲಿ ಎಪ್ರಿಲ್ 29 ರಂದು ನಿಲ್ಲಿಸಿದ್ದು, ಎಪ್ರಿಲ್ 30 ರಂದು ಶಾಲಾ ಬಸ್ಸಿನ ಚಾಲಕರು ಬಸ್ ಚಲಾಯಿಸಲು ಬಂದಾಗ ಬಸ್ಸುಗಳು ಸ್ಟಾರ್ಟ್ ಆಗದೆ ಇರುವಾಗ ಪರಿಶೀಲನೆ ನಡೆಸಿದ ವೇಳೆ ಬಸ್ಸುಗಳ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿ ಕಳವು Rating: 5 Reviewed By: karavali Times
Scroll to Top