ಎನ್.ಸಿ.ರೋಡು : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ - Karavali Times ಎನ್.ಸಿ.ರೋಡು : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ - Karavali Times

728x90

1 May 2026

ಎನ್.ಸಿ.ರೋಡು : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ

 ಬಂಟ್ವಾಳ, ಮೇ 01, 2026 (ಕರಾವಳಿ ಟೈಮ್ಸ್) : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಆರೋಪಿಯೋರ್ವ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾವಳಮೂಡೂರು ಗ್ರಾಮದ ನಿವಾಸಿ ಮಹಮ್ಮದ್ (60) ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಇವರು ಎಪ್ರಿಲ್ 28 ರಂದು ಬೆಳಿಗ್ಗೆ ಕಾವಳಮೂಡೂರು ಗ್ರಾಮದ ಎನ್ ಸಿ ರೋಡು ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಪರಿಚಯದ ಅದ್ದು ಎಂಬವರ ಮಗ ಜಲಾಲ್ ಎಂಬಾತನು ಅಡ್ಡಗಟ್ಟಿ ಅವ್ಯಾಚ ಶಬ್ದದಿಂದ ಬೈದು, ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಮಹಮ್ಮದ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಎನ್.ಸಿ.ರೋಡು : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ Rating: 5 Reviewed By: karavali Times
Scroll to Top