ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿದ್ದ ಆರೋಪಿ ವಾಪಾಸು ಬರುವಾಗ ಬಂಟ್ವಾಳ ಪೊಲೀಸರ ಬಲೆಗೆ - Karavali Times ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿದ್ದ ಆರೋಪಿ ವಾಪಾಸು ಬರುವಾಗ ಬಂಟ್ವಾಳ ಪೊಲೀಸರ ಬಲೆಗೆ - Karavali Times

728x90

6 May 2026

ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿದ್ದ ಆರೋಪಿ ವಾಪಾಸು ಬರುವಾಗ ಬಂಟ್ವಾಳ ಪೊಲೀಸರ ಬಲೆಗೆ

 ಬಂಟ್ವಾಳ, ಮೇ 06, 2026 (ಕರಾವಳಿ ಟೈಮ್ಸ್) : ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿದೇಶದಿಂದ ಹಿಂತಿರುಗುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮೇ 5 ರಂದು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಕರಿಯಂಗಳ ನಿವಾಸಿ ದುನಿಯಾ ಶರೀಫ್ ಅಲಿಯಾಸ್ ಮಹಮ್ಮದ್ ಶರೀಫ್ (52) ಎಂದು ಹೆಸರಿಸಲಾಗಿದೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ  ಕ್ರಮಾಂಕ 260/2014 ಕಲಂ 306 ಐಪಿಸಿ ಪ್ರಕರಣದ ಆರೋಪಿಯಾಗಿದ್ದ ಶರೀಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತ ಮೇ 5 ರಂದು ವಿದೇಶದಿಂದ ಹಿಂದಿರುಗುತ್ತಿದ್ದಾಗ, ಮುಂಬೈ ಸಹರಾ ಠಾಣಾ ಪೆÇಲೀಸರ ಸಹಕಾರದೊಂದಿಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೆÇಲೀಸರು ದಸ್ತಗಿರಿ ಮಾಡಿದ್ದು, ಮೇ 6 ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ತೆರಳಿದ್ದ ಆರೋಪಿ ವಾಪಾಸು ಬರುವಾಗ ಬಂಟ್ವಾಳ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top