ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ - Karavali Times ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ - Karavali Times

728x90

6 May 2026

ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಬಂಟ್ವಾಳ, ಮೇ 06, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹವೊಂದು ಮೇ 5 ರಂದು ಸಂಜೆ ಪತ್ತೆಯಾಗಿದೆ. 

ಈ ಬಗ್ಗೆ ನರಿಕೊಂಬು ಗ್ರಾಮದ ದಿಂಡಿಕೆರೆ ನಿವಾಸಿ ನವೀನ್ (30) ಅವರು ಪೊಲೀಸರಿಗೆ ದೂರು ನೀಡಿದ್ದು, ಮೇ 5 ರಂದು ಸಂಜೆ ಸುಮಾರು 4 ಗಂಟೆಯ ಸಮಯಕ್ಕೆ ನರಿಕೊಂಬು ಗ್ರಾಮದ ನೇತ್ರಾವತಿ ಬ್ರಿಡ್ಜ್ ಬಳಿ ನೇತ್ರಾವತಿ ನದಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಅಪರಿಚಿತ ಗಂಡಸಿನ ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಮೃತದೇಹವು ಸುಮಾರು 40 ರಿಂದ 50 ವರ್ಷದ ಯಾರೋ ಅಪರಿಚಿತ ಗಂಡಸಿನ ಮೃತದೇಹವಾಗಿದ್ದು, ಮೃತದೇಹವು ಸಂಪೂರ್ಣವಾಗಿ ಕೊಳೆತ ಸ್ಥಿಯಲ್ಲಿತ್ತು. ಮೃತದೇಹದ ಮೇಲೆ ಬಿಳಿ ಬಣ್ಣದ ಶರ್ಟ್ ಮತ್ತು ಕಡು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ. ಮೃತ ವ್ಯಕ್ತಿಯು ಸುಮಾರು ಒಂದು ವಾರದ ಹಿಂದೆ ಎಲ್ಲಿಯೊ ಆಕಸ್ಮಿಕವಾಗಿ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದು ಅಥವಾ ಯಾವುದೋ ಪ್ರದೇಶದಲ್ಲಿ ನದಿ ನೀರಿಗೆ ಬಿದ್ದು ನೀರಿನಲ್ಲಿ ತೇಲಾಡಿಕೊಂಡು ಬಂದು ನದಿಯ ದಡದಲ್ಲಿ ಬಿದ್ದಿರಬಹುದು ಎಂದು ಶಂಕಿಸಿ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ Rating: 5 Reviewed By: karavali Times
Scroll to Top