ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಸಂಬಂಧಿ ಯುವಕನಿಂದ ಭೀಕರ ದಾಳಿ : ಗಂಭೀರ ಕತ್ತಿ ಏಟಿಗೆ ಯುವತಿ ದಾರುಣ ಸಾವು, ಏಕಮುಖ ಪ್ರೇಮಕ್ಕೆ ಅಮಾಯಕ ಹೆಣ್ಣು ಬಲಿ - Karavali Times ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಸಂಬಂಧಿ ಯುವಕನಿಂದ ಭೀಕರ ದಾಳಿ : ಗಂಭೀರ ಕತ್ತಿ ಏಟಿಗೆ ಯುವತಿ ದಾರುಣ ಸಾವು, ಏಕಮುಖ ಪ್ರೇಮಕ್ಕೆ ಅಮಾಯಕ ಹೆಣ್ಣು ಬಲಿ - Karavali Times

728x90

16 July 2026

ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಸಂಬಂಧಿ ಯುವಕನಿಂದ ಭೀಕರ ದಾಳಿ : ಗಂಭೀರ ಕತ್ತಿ ಏಟಿಗೆ ಯುವತಿ ದಾರುಣ ಸಾವು, ಏಕಮುಖ ಪ್ರೇಮಕ್ಕೆ ಅಮಾಯಕ ಹೆಣ್ಣು ಬಲಿ

ಬಂಟ್ವಾಳ, ಜುಲೈ 16, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಹೊಸ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಯುವತಿಯೋರ್ವಳಿಗೆ ಯುವಕನೋರ್ವ ಕತ್ತಿಯಿಂದ ಭೀಕರವಾಗಿ ದಾಳಿ ನಡೆಸಿದ ಪರಿಣಾಮ ಆಕೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಜುಲೈ 16 ರಂದು ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ. 

ಮೃತ ಯುವತಿಯನ್ನು ಉಳಿ ಗ್ರಾಮದ ಕಕ್ಕೆಪದವು ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ (22) ಎಂದು ಹೆಸರಿಸಲಾಗಿದೆ. ಆರೋಪಿ ಯುವಕನನ್ನು ಯುವತಿಯ ದೂರದ ಸಂಬಂಧಿ ಎನ್ನಲಾಗಿದ್ದು, ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ಈತ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 

ಯುವತಿ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎಂದಿನಂತೆ ಸಂಜೆ ಕೆಲಸ ಬಿಟ್ಟು ಮನೆಗೆ ತೆರಳಲು ಕಕ್ಕೆಪದವು ಬಸ್ಸು ಹತ್ತಲು ಬಿ ಸಿ ರೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಹಿಂಬಾಲಿಸಿ ಬಂದ ಆರೋಪಿ ಅಟ್ಟಾಡಿಸಿ ಕತ್ತಿಯಿಂದ ಕಡಿದಿದ್ದಾನೆ. ಕತ್ತಿ ಏಟಿಗೆ ಆಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಸ್ಪಷ್ಟ ಕಾರಣ ತಿಳಿದು ಬರಬೇಕಷ್ಟೆ. 

ದಾಳಿ ನಡೆಸಿದ ಯುವಕ ಸ್ಥಳದಿಂದ ಓಡಿ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ತಕ್ಷಣ ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಧಾವಿಸಿ ಬಂದಿದ್ದು, ಆರೋಪಿ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಸಂಬಂಧಿ ಯುವಕನಿಂದ ಭೀಕರ ದಾಳಿ : ಗಂಭೀರ ಕತ್ತಿ ಏಟಿಗೆ ಯುವತಿ ದಾರುಣ ಸಾವು, ಏಕಮುಖ ಪ್ರೇಮಕ್ಕೆ ಅಮಾಯಕ ಹೆಣ್ಣು ಬಲಿ Rating: 5 Reviewed By: karavali Times
Scroll to Top