ಕಾನತ್ತಡ್ಕ : ಕಾರಿನಲ್ಲಿ ಗಾಂಜಾ ತಂದು ಸೇವಿಸುತ್ತಿದ್ದ ನಾಲ್ವರು ವಿಟ್ಲ ಪೊಲೀಸರ ವಶಕ್ಕೆ - Karavali Times ಕಾನತ್ತಡ್ಕ : ಕಾರಿನಲ್ಲಿ ಗಾಂಜಾ ತಂದು ಸೇವಿಸುತ್ತಿದ್ದ ನಾಲ್ವರು ವಿಟ್ಲ ಪೊಲೀಸರ ವಶಕ್ಕೆ - Karavali Times

728x90

10 August 2026

ಕಾನತ್ತಡ್ಕ : ಕಾರಿನಲ್ಲಿ ಗಾಂಜಾ ತಂದು ಸೇವಿಸುತ್ತಿದ್ದ ನಾಲ್ವರು ವಿಟ್ಲ ಪೊಲೀಸರ ವಶಕ್ಕೆ

 ಬಂಟ್ವಾಳ, ಆಗಸ್ಟ್ 11, 2026 (ಕರಾವಳಿ ಟೈಮ್ಸ್) : ವಿಟ್ಲ‌ ಕಸಬಾ ಗ್ರಾಮದ ಕಾನತ್ತಡ್ಕ ಎಂಬಲ್ಲಿ ಕಾರಿನಲ್ಲಿ ಗಾಂಜಾ ತಂದು ಸೇವಿಸುತ್ತಿದ್ದ ನಾಲ್ವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಆಗಸ್ಟ್ 9 ರಂದು ಸಂಜೆ ನಡೆದಿದೆ.

ಬಂಧಿತ ಆರೋಪಿಗಳನ್ನು ಇಲ್ಲಿನ ನಿವಾಸಿ ನಾಗರಾಜ ಕೆ (32), ಕೊಳ್ನಾಡು ನಿವಾಸಿ ಕುಮಾರ್ ಕೃಷ್ಣ (27), ಕೇಪು ನಿವಾಸಿ  ಅಬ್ದುಲ್ ಜಲೀಲ್ (40) ಹಾಗೂ ವಿಟ್ಲ ಕಸಬಾ ನಿವಾಸಿ ಅಬ್ದುಲ್ ಖಾದರ್ ಯು (31) ಎಂದು ಗುರುತಿಸಲಾಗಿದೆ.

ಆಗಸ್ಟ್ 9 ರಂದು ಸಂಜೆ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕ ಎಂಬಲ್ಲಿ ಕಾರೊಂದು  ಅನುಮಾನಾಸ್ಪದವಾಗಿ ಕಂಡು ಬರುತ್ತಿರುವುದಾಗಿ ವಿಟ್ಲ ಠಾಣಾ ಪಿಎಸ್ಐ ರಾಮಕೃಷ್ಣ ಅವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ  ಸ್ಥಳಕ್ಕೆ ತೆರಳಿದಾಗ ನಾಗರಾಜ ಕೆ ಎಂಬಾತನ ಮನೆಯ ಅಂಗಳದಲ್ಲಿ ಕೆಎ17, ಎನ್ 7443 ನೋಂದಣಿ ಸಂಖ್ಯೆಯ ಕಾರು ಕಂಡುಬಂದಿದೆ.  ಸ್ಥಳದಲ್ಲಿ 4 ಮಂದಿ ಆರೋಪಿಗಳು ಮನೆಯ ಜಗಲಿಯಲ್ಲಿ ಕುಳಿತಿದ್ದು ಅವರನ್ನು ವಿಚಾರಿಸಿದಾಗ ಮನೆ ಮಾಲಿಕ ನಾಗರಾಜ ಕೆ ಸಹಿತ ನಾಲ್ವರು ಆರೋಪಿಗಳು ಕಾರಿನಲ್ಲಿ ಗಾಂಜಾವನ್ನು ತಂದು ಸೇದಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಈ ಬಗ್ಗೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ಮಾಡಿರುವುರು ಧೃಢಪಟ್ಟಿರುವ ಹಿನ್ನಲೆಯಲ್ಲಿ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 173/2026, ಕಲಂ: 27(b) NARCOTIC DRUGS & PSYCHOTROPIC SUBSTANCES ACT, 1985 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಾನತ್ತಡ್ಕ : ಕಾರಿನಲ್ಲಿ ಗಾಂಜಾ ತಂದು ಸೇವಿಸುತ್ತಿದ್ದ ನಾಲ್ವರು ವಿಟ್ಲ ಪೊಲೀಸರ ವಶಕ್ಕೆ Rating: 5 Reviewed By: lk
Scroll to Top