ತುಂಬೆ ಅಣೆಕಟ್ಟು ಜಾಕ್ ವೆಲ್ ಶುದ್ದೀಕರಣ ಕಾಮಗಾರಿ : ನೀರು ಸರಬರಾಜಿನಲ್ಲಾಗುವ ವ್ಯತ್ಯಯಕ್ಕೆ ಸಹಕರಿಸುವಂತೆ ಮನಪಾ ಸೂಚನೆ - Karavali Times ತುಂಬೆ ಅಣೆಕಟ್ಟು ಜಾಕ್ ವೆಲ್ ಶುದ್ದೀಕರಣ ಕಾಮಗಾರಿ : ನೀರು ಸರಬರಾಜಿನಲ್ಲಾಗುವ ವ್ಯತ್ಯಯಕ್ಕೆ ಸಹಕರಿಸುವಂತೆ ಮನಪಾ ಸೂಚನೆ - Karavali Times

728x90

11 August 2026

ತುಂಬೆ ಅಣೆಕಟ್ಟು ಜಾಕ್ ವೆಲ್ ಶುದ್ದೀಕರಣ ಕಾಮಗಾರಿ : ನೀರು ಸರಬರಾಜಿನಲ್ಲಾಗುವ ವ್ಯತ್ಯಯಕ್ಕೆ ಸಹಕರಿಸುವಂತೆ ಮನಪಾ ಸೂಚನೆ

ಮಂಗಳೂರು, ಆಗಸ್ಟ್ 11, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರಕ್ಕೆ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಿ ನಂತರ ಜಲ ಸಂಸ್ಕರಣ ಘಟಕಗಳಲ್ಲಿ ನೀರನ್ನು ಶುದ್ದೀಕರಿಸಿ ನಗರದ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನದಿಯ ನೀರಿನ ಹರಿವು ಹೆಚ್ಚಾಗಿದ್ದು, ತುಂಬೈ ಜಾಕ್ ವೆಲ್ ನ ಇನ್ ಟೇಕ್ ಭಾಗದಲ್ಲಿ ಮರದ ದಿಮ್ಮಿಗಳು, ಕೊಂಬೆಗಳು, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ, ಚೀಲಗಳು, ಹೂಳು ಹಾಗೂ ಇತರ ವಸ್ತುಗಳು ಸಂಗ್ರಹಗೊಂಡು ಪಂಪ್ ನ ಸ್ಟೈನರ್ ಹಾನಿಗೊಳಗಾಗಿ ಮುಚ್ಚಿ ಹೋಗಿರುತ್ತದೆ. ಇದರಿಂದ ಪಂಪಿನ ಪಂಪಿಂಗ್ ಸಾಮಥ್ರ್ಯ ಕಡಿಮೆಯಾಗಿರುತ್ತದೆ. 

ಆದ್ದರಿಂದ ಇನ್ ಟೇಕ್ ಭಾಗದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಹಾನಿಯಾಗಿರುವ ಸ್ಟೈನರನ್ನು ಸರಿಪಡಿಸಿ ಪಂಪಿಂಗ್ ವ್ಯವಸ್ಥೆಯನ್ನು ಸರಿಪಡಿಸಿ ಪಂಪಿಂಗ್ ವ್ಯವಸ್ಥೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ನೀರನ್ನು ಪೂರ್ಣ ಪಂಪಿಂಗ್ ಸಾಮಥ್ರ್ಯದಲ್ಲಿ ನಿರಂತರವಾಗಿ ಪಂಪಿಂಗ್ ಮಾಡಲು ಕಷ್ಟ ಸಾಧ್ಯವಾಗಿರುತ್ತದೆ. 

ಆದುದರಿಂದ ಸುರತ್ಕಲ್ ಪ್ರದೇಶದ ವಾರ್ಡುಗಳು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಲೋ ಲೆವೆಲ್ ವಾರ್ಡ್‍ಗಳಿಗೆ ಪರ್ಯಾಯ ದಿನಗಳಲ್ಲಿ ನೀರನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಆಗಸ್ಟ್ 31ರವರೆಗೆ ಅನುಸರಿಸಲಾಗುವುದು. ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೀರನ್ನು ಮಿತವಾಗಿ ಮತ್ತು ಅವಶ್ಯಕತೆಗನುಗುಣವಾಗಿ ಬಳಸುವಂತೆ ಮನಪಾ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ಅಣೆಕಟ್ಟು ಜಾಕ್ ವೆಲ್ ಶುದ್ದೀಕರಣ ಕಾಮಗಾರಿ : ನೀರು ಸರಬರಾಜಿನಲ್ಲಾಗುವ ವ್ಯತ್ಯಯಕ್ಕೆ ಸಹಕರಿಸುವಂತೆ ಮನಪಾ ಸೂಚನೆ Rating: 5 Reviewed By: karavali Times
Scroll to Top