ಕಾಸರಗೋಡು : ಒಂದೇ ಕುಟುಂಬದ ಮೂವರು ಮಕ್ಕಳು ನೀರುಪಾಲು - Karavali Times ಕಾಸರಗೋಡು : ಒಂದೇ ಕುಟುಂಬದ ಮೂವರು ಮಕ್ಕಳು ನೀರುಪಾಲು - Karavali Times

728x90

30 April 2020

ಕಾಸರಗೋಡು : ಒಂದೇ ಕುಟುಂಬದ ಮೂವರು ಮಕ್ಕಳು ನೀರುಪಾಲು



ಕಾಸರಗೋಡು (ಕರಾವಳಿ ಟೈಮ್ಸ್) : ದುರಂತವೊಂದರಲ್ಲಿದರಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡು ಜಿಲ್ಲೆ ಕನ್ನಂಗಾಡಿನ ಕಲ್ಲುರಾವಿಯಲ್ಲಿ ಗುರುವಾರ ಸಂಜೆಯ ವೇಳೆಗೆ ನಡೆದಿದೆ.

ಮೃತ ಮಕ್ಕಳನ್ನು ನೂರುದ್ದೀನ್ ಅವರ ಮಗ ಬಶೀರ್ (4), ನಾಸಿರ್ ಅವರ ಪುತ್ರ ಅಜ್ನಾಸ್ (5) ಮತ್ತು ಸಮೀರ್ ಅವರ ಪುತ್ರ ನಿಷಾದ್ (6) ಎಂದು ಹೆಸರಿಸಲಾಗಿದೆ.

ವರದಿಗಳ ಪ್ರಕಾರ, ಮಕ್ಕಳು ಆಟವಾಡಲು ಕೆರೆಗೆ ಇಳಿದಿದ್ದಾರೆ. ಮನೆ ಸಮೀಪ ಆಟವಾಡುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು  ಪೆÇೀಷಕರು ತಿಳಿಸಿದ್ದಾರೆ. ಪೆÇೀಷಕರು ಮಕ್ಕಳ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯಿಂದ 200 ಮೀಟರ್ ದೂರದಲ್ಲಿರುವ ಕೆರೆಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ.

ಸ್ಥಳೀಯರು ತಕ್ಷಣ ಮಕ್ಕಳನ್ನು ಕನ್ನಂಗಾಡಿನ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಮಕ್ಕಳು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಕಾಸರಗೋಡು : ಒಂದೇ ಕುಟುಂಬದ ಮೂವರು ಮಕ್ಕಳು ನೀರುಪಾಲು Rating: 5 Reviewed By: karavali Times
Scroll to Top