ತಲಪಾಡಿಯ ವ್ಯಕ್ತಿ ಕುವೈತ್ ದೇಶದಲ್ಲಿ ಹೃದಯಾಘಾತದಿಂದ ನಿಧನ - Karavali Times ತಲಪಾಡಿಯ ವ್ಯಕ್ತಿ ಕುವೈತ್ ದೇಶದಲ್ಲಿ ಹೃದಯಾಘಾತದಿಂದ ನಿಧನ - Karavali Times

728x90

4 June 2026

ತಲಪಾಡಿಯ ವ್ಯಕ್ತಿ ಕುವೈತ್ ದೇಶದಲ್ಲಿ ಹೃದಯಾಘಾತದಿಂದ ನಿಧನ


 ಬಂಟ್ವಾಳ, ಜೂನ್ 05, 2026 (ಕರಾವಳಿ ಟೈಮ್ಸ್) : ಕುವೈತ್ ದೇಶದಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳ ತಾಲೂಕಿನ ಬಿ ಸಿ ರೋಡು ಸಮೀಪದ ತಲಪಾಡಿ ನಿವಾಸಿಯೊಬ್ಬರು ಹೃದಯಾಘತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತರನ್ನು ತಲಪಾಡಿ ನಿವಾಸಿ ಅಬ್ದಲ್ ರಝಕ್ ವಳಚ್ಚಿಲ್ (58) ಎಂದು ಹೆಸರಿಸಲಾಗಿದೆ. ಇವರು ಮೂಲತಃ ಅರ್ಕುಳ ಸಮೀಪದ ವಳಚ್ಚಿಲ್ ನಿವಾಸಿಯಾಗಿದ್ದು, ತಲಪಾಡಿಯಲ್ಲಿ ಸ್ವಂತ ಮನೆಮಾಡಿ ನೆಲೆಸಿದ್ದರು. ಹತ್ತಾರು ವರ್ಷಗಳಿಂದ ಕುವೈಟ್ ದೇಶದ ಫರ್ವಾನಿಯ ಎಂಬಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಅವರು ಬುಧವಾರವೂ ಅವರು ಕೆಲಸ ಮಾಡುವ ಗ್ರಾಂಡ್ ಹೈಪರ್ ಮಾರ್ಕೆಟಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.  

ಶುಕ್ರವಾರ ಮಧ್ಯಾಹ್ನ ಕುವೈಟ್ ಸಮಯ ಒಂದೂವರೆ ಗಂಟೆಗೆ  ಸುಬಾನ್ ಎಂಬಲ್ಲಿ ಮಯ್ಯತ್ ನಮಾಜ್ ನಿರ್ವಹಿಸಿ ನಂತರ ಸಂಜೆ ಕುವೈತ್ ಏರ್ ವೇಸ್ ಮೂಲಕ ಬೆಂಗಳೂರಿಗೆ ತಲುಪಿ ಶನಿವಾರ ಬೆಳಿಗ್ಗೆ ಮೂರು ಗಂಟೆಗೆ ಅಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ತರಲಾಗುವುದು ಎಂದು ತಿಳಿದು ಬಂದಿದೆ.

ಬಳಿಕ ತಲಪಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿ ನಂತರ ಮಫತ್ ಲಾಲ್ ದಫನ ಭೂಮಿಯಲ್ಲಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.



  • Blogger Comments
  • Facebook Comments

0 comments:

Post a Comment

Item Reviewed: ತಲಪಾಡಿಯ ವ್ಯಕ್ತಿ ಕುವೈತ್ ದೇಶದಲ್ಲಿ ಹೃದಯಾಘಾತದಿಂದ ನಿಧನ Rating: 5 Reviewed By: lk
Scroll to Top