ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಿಂದಕ್ಕೆ : ಮಹಾ ಸಿಎಂ ಉದ್ದವ್ ಠಾಕ್ರೆ ಅವಿರೋಧ ಆಯ್ಕೆ ಸಾಧ್ಯತೆ - Karavali Times ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಿಂದಕ್ಕೆ : ಮಹಾ ಸಿಎಂ ಉದ್ದವ್ ಠಾಕ್ರೆ ಅವಿರೋಧ ಆಯ್ಕೆ ಸಾಧ್ಯತೆ - Karavali Times

728x90

10 May 2020

ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಿಂದಕ್ಕೆ : ಮಹಾ ಸಿಎಂ ಉದ್ದವ್ ಠಾಕ್ರೆ ಅವಿರೋಧ ಆಯ್ಕೆ ಸಾಧ್ಯತೆ



ಮುಂಬೈ (ಕರಾವಳಿ ಟೈಮ್ಸ್) : ಮಹಾರಾಷ್ಟ್ರ ಮೇಲ್ಮನೆ ಚುನಾವಣೆ ನಿಗದಿಯಾಗಿದ್ದು, ಮಹಾ ವಿಕಾಸ್‌ ಅಘಾಡಿಯ ಮಿತ್ರ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದನ್ನು ಶಿವಸೇನೆ ವಿರೋಧಿಸಿದ ಪರಿಣಾಮ ಈಗ ಕೈ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 
ಈಗ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆದಿಯಾಗಿ ಮೇಲ್ಮನೆ ಚುನಾವಣೆಗೆ 9 ಅಭ್ಯರ್ಥಿಗಳು ಕಣದಲ್ಲಿದ್ದು, ಉದ್ಧವ್ ಠಾಕ್ರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. 

ಸ್ಪರ್ಧೆಯೇ ಇಲ್ಲದೇ ಮಹಾರಾಷ್ಟ್ರ ವಿಕಾಸ್ ಅಘಾಡಿಯ ಭಾಗವಾಗಿರುವ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಗಳಿಸಲಿದೆ.  ಬಿಜೆಪಿ 4 ಸ್ಥಾನಗಳನ್ನು ಗಳಿಸಲಿದೆ. 
ಮೇಲ್ಮನೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಮೇ.09 ರಂದು ಏಕಾಏಕಿಯಾಗಿ 2 ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಎರಡನೇ ಅಭ್ಯರ್ಥಿಯನ್ನು ಹಿಂಪಡೆದಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಿಂದಕ್ಕೆ : ಮಹಾ ಸಿಎಂ ಉದ್ದವ್ ಠಾಕ್ರೆ ಅವಿರೋಧ ಆಯ್ಕೆ ಸಾಧ್ಯತೆ Rating: 5 Reviewed By: karavali Times
Scroll to Top