ದ್ವಿತೀಯ ಪಿಯುಸಿ : ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿಗೆ 95 ಶೇ. ಫಲಿತಾಂಶ - Karavali Times ದ್ವಿತೀಯ ಪಿಯುಸಿ : ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿಗೆ 95 ಶೇ. ಫಲಿತಾಂಶ - Karavali Times

728x90

14 July 2020

ದ್ವಿತೀಯ ಪಿಯುಸಿ : ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿಗೆ 95 ಶೇ. ಫಲಿತಾಂಶ

ಕಲಾ ವಿಭಾಗದ ಫಾತಿಮತ್ ನಿಶಾ 558


ವಾಣಿಜ್ಯ ವಿಭಾಗದ ಝೈತುನ್ನೀಸಾ 551


ವಿಜ್ಞಾನ ವಿಭಾಗದ ಝೈನಬಾ ಅಫ್ರತ್ 540


ಬಂಟ್ವಾಳ (ಕರಾವಳಿ ಟೈಮ್ಸ್) : 2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶೇ. 95 ಫಲಿತಾಂಶ ದಾಖಲಿಸಿದ್ದಾರೆ. ಒಟ್ಟು 140 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು.

24 ಮಂದಿ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ, 94 ಮಂದಿ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಹಾಗೂ ಇತರರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕಲಾ ವಿಭಾಗದ ಫಾತಿಮತ್ ನಿಶಾ 558, ವಾಣಿಜ್ಯ ವಿಭಾಗದ ಝೈತುನ್ನೀಸಾ 551 ಹಾಗೂ ವಿಜ್ಞಾನ ವಿಭಾಗದ ಝೈನಬಾ ಅಫ್ರತ್ 540 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.








  • Blogger Comments
  • Facebook Comments

0 comments:

Post a Comment

Item Reviewed: ದ್ವಿತೀಯ ಪಿಯುಸಿ : ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿಗೆ 95 ಶೇ. ಫಲಿತಾಂಶ Rating: 5 Reviewed By: karavali Times
Scroll to Top