ಕಾಲೇಜು ಆರಂಭಕ್ಕೆ ಹೊಸ ಗೈಡ್ ಲೈನ್ ಪ್ರಕಟಿಸಿದ ಯುಜಿಸಿ : ನ. 1 ರಿಂದ ಕಾಲೇಜು ತರಗತಿ ಆರಂಭಿಸಲು ಸೂಚನೆ - Karavali Times ಕಾಲೇಜು ಆರಂಭಕ್ಕೆ ಹೊಸ ಗೈಡ್ ಲೈನ್ ಪ್ರಕಟಿಸಿದ ಯುಜಿಸಿ : ನ. 1 ರಿಂದ ಕಾಲೇಜು ತರಗತಿ ಆರಂಭಿಸಲು ಸೂಚನೆ - Karavali Times

728x90

25 September 2020

ಕಾಲೇಜು ಆರಂಭಕ್ಕೆ ಹೊಸ ಗೈಡ್ ಲೈನ್ ಪ್ರಕಟಿಸಿದ ಯುಜಿಸಿ : ನ. 1 ರಿಂದ ಕಾಲೇಜು ತರಗತಿ ಆರಂಭಿಸಲು ಸೂಚನೆ

 


ನವದೆಹಲಿ, ಸೆ. 25, 2020 (ಕರಾವಳಿ ಟೈಮ್ಸ್) : ನವೆಂಬರ್ 1 ರಿಂದ 2020-21ನೇ ಸಾಲಿನ ಕಾಲೇಜು ತರಗತಿಗಳು ಆರಂಭವಾಗಲಿದ್ದು, ಈ ಸಂಬಂಧ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗ (ಯುಜಿಸಿ) ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಯುಜಿಸಿ ಪದವಿ-ಸ್ನಾತಕೋತ್ತರದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹೊಸ ಮಾರ್ಗಸೂಚಿ ಹಾಗೂ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ ಒಳಗೆ ಪ್ರವೇಶ ಪ್ರಕ್ರಿಯೆ ಮುಗಿಸಲು ಸಂಬಂಧಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೆÇೀಕ್ರಿಯಾಲ್ ನಿಶಾಂಕ್ ಅವರು ಟ್ವೀಟ್ ಮಾಡುವ  ಮೂಲಕ ಈ ವಿಷಯವನ್ನು ಪ್ರಕಟಿಸಿದ್ದು, ಯುಜಿಸಿ ಮಾರ್ಗಸೂಚಿ ಪ್ರಕಾರ 2020-21ನೇ ಸಾಲಿನ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನ. 1 ರಿಂದಲೇ ತರಗತಿ ಆರಂಭವಾಗಲಿದೆ. ಒಂದು ವೇಳೆ ಅರ್ಹ ಪರೀಕ್ಷೆಗಳ ಫಲಿತಾಂಶ ಘೋಷಣೆ ವಿಳಂಬವಾದಲ್ಲಿ ಮಾತ್ರ ಸಂಬಂಧಿತ ವಿಶ್ವವಿದ್ಯಾಲಯಗಳು ನ. 18 ರ ಒಳಗೆ ತರಗತಿ ಆರಂಭಿಸಬೇಕು ಎಂದು ತಿಳಿಸಲಾಗಿದೆ. 

ನ. 30ರ ಒಳಗೆ ಉಳಿಕೆ ಸೀಟುಗಳ ಪ್ರವೇಶಾತಿ ಕೂಡ ಮುಗಿಸಿರಬೇಕು. ಇನ್ನು ಪ್ರವೇಶಾತಿಯನ್ನು ಪ್ರವೇಶ ಪರೀಕ್ಷೆ ಮೂಲಕವೇ ನಡೆಸುವಂಥ ಹಾಗೂ ಆ ನಿಟ್ಟಿನಲ್ಲಿ ತಯಾರಾಗಿರುವಂಥ ಶಿಕ್ಷಣ ಸಂಸ್ಥೆಗಳು ಆದಷ್ಟು ಶೀಘ್ರ ಪ್ರಥಮ ವರ್ಷದ ಪಿಜಿ-ಯುಜಿ ತರಗತಿ ಆರಂಭಿಸುವಂತೆ ಸೂಚಿಸಲಾಗಿದೆ. ಫಸ್ಟ್ ಸೆಮಿಸ್ಟರ್ ಪರೀಕ್ಷೆಯನ್ನು 2021ರ ಮಾರ್ಚ್ 8 ರಿಂದ 26 ರ ಅವಧಿಯಲ್ಲಿ ನಡೆಸುವಂತೆಯೂ ನಿರ್ದೇಶನ ನೀಡಲಾಗಿದೆ. 










  • Blogger Comments
  • Facebook Comments

0 comments:

Post a Comment

Item Reviewed: ಕಾಲೇಜು ಆರಂಭಕ್ಕೆ ಹೊಸ ಗೈಡ್ ಲೈನ್ ಪ್ರಕಟಿಸಿದ ಯುಜಿಸಿ : ನ. 1 ರಿಂದ ಕಾಲೇಜು ತರಗತಿ ಆರಂಭಿಸಲು ಸೂಚನೆ Rating: 5 Reviewed By: karavali Times
Scroll to Top