ಮಂಗಳೂರು ಪೊಲೀಸರ ಭಾರೀ‌ ಕಾರ್ಯಾಚರಣೆ 15 ಲಕ್ಷಕ್ಕೂ ಅಧಿಕ ಮೌಲ್ಯದ ಎಂಡಿಎಂಎದೊಂದಿಗೆ ಮಹಿಳೆಯ ಬಂಧನ - Karavali Times ಮಂಗಳೂರು ಪೊಲೀಸರ ಭಾರೀ‌ ಕಾರ್ಯಾಚರಣೆ 15 ಲಕ್ಷಕ್ಕೂ ಅಧಿಕ ಮೌಲ್ಯದ ಎಂಡಿಎಂಎದೊಂದಿಗೆ ಮಹಿಳೆಯ ಬಂಧನ - Karavali Times

728x90

2 November 2026

ಮಂಗಳೂರು ಪೊಲೀಸರ ಭಾರೀ‌ ಕಾರ್ಯಾಚರಣೆ 15 ಲಕ್ಷಕ್ಕೂ ಅಧಿಕ ಮೌಲ್ಯದ ಎಂಡಿಎಂಎದೊಂದಿಗೆ ಮಹಿಳೆಯ ಬಂಧನ


ಮಂಗಳೂರು, ನವೆಂಬರ್ 02, 2026 (ಕರಾವಳಿ ಟೈಮ್ಸ್) : ಮಂಗಳೂರು  ನಗರದಾದ್ಯಂತ   ಯುವಕರಿಗೆ ಮತ್ತು  ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಮಹಿಳಾ ಖದೀಮೆಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿತೆಯನ್ನು ಮೂಲತಃ ಬೆಳ್ತಂಗಡಿ ತಾಲೂಕು, ಲಾಯಿಲ ಗ್ರಾಮದ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್ ವೆಲ್  ಉಜ್ಜೋಡಿಯ ಹತ್ತಿರ  ರಾಧಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಕಟ್ಟಡದ, ಒಂದನೇ ಮಹಡಿಯಲ್ಲಿರುವ ಫ್ಲ್ಯಾಟ್ ನಂಬ್ರ 103 ರಲ್ಲಿ ವಾಸವಾಗಿರುವ ರಫೀಕ್ ಎಂಬಾತನ ಪತ್ನಿ ನಸೀಮಾ ಅಲಿಯಾಸ್ ನಸೀಮ (42) ಎಂದು ಗುರುತಿಸಲಾಗಿದೆ.

ನವೆಂಬರ್ 1 ರಂದು  ಮಂಗಳೂರು  ಉತ್ತರ ಪೊಲೀಸ್  ಠಾಣೆಯಲ್ಲಿ  ವರದಿಯಾದ  ಮಾದಕ  ವಸ್ತು  ಸೇವನೆ ಪ್ರಕರಣದ ಆರೋಪಿತರಿಗೆ  ಮಾದಕ ವಸ್ತು ಪೂರೈಸುತ್ತಿದ್ದ ಈಕೆಯ  ಬಗ್ಗೆ  ಮಾಹಿತಿ ಸಂಗ್ರಹಿಸಿದ ಪೊಲೀಸರು ಪೂರೈಕೆಯ  ಜಾಲದ  ಬಗ್ಗೆ  ತನಿಖೆ ನಡೆಸಿ ಆರೋಪಿತೆ ವಾಸ್ತವ್ಯವಿದ್ದಲ್ಲಿ  ಶೋಧ ನಡೆಸಿ ಸುಮಾರು 15.30  ಲಕ್ಷ ರೂಪಾಯಿ ಮೌಲ್ಯದ 153 ಗ್ರಾಂ ಎಂಡಿಎಂಎ ಅನ್ನು ಪೊಲೀಸರು  ಸ್ವಾಧೀನ ಪಡಿಸಿಕೊಂಡಿದ್ದಾರೆ.

 ಬಂಧಿತ ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಇನ್ನು ಕೆಲವು  ಆರೋಪಿಗಳು  ಭಾಗಿಯಾಗಿದ್ದು,, ಅವರುಗಳ  ದಸ್ತಗಿರಿಗೆ ಪೊಲೀಸರು ಬಲೆ ಬೀಸಿದ್ದಾರೆ. 

 ಆರೋಪಿತೆ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪೊಲೀಸರ ಭಾರೀ‌ ಕಾರ್ಯಾಚರಣೆ 15 ಲಕ್ಷಕ್ಕೂ ಅಧಿಕ ಮೌಲ್ಯದ ಎಂಡಿಎಂಎದೊಂದಿಗೆ ಮಹಿಳೆಯ ಬಂಧನ Rating: 5 Reviewed By: lk
Scroll to Top