ಆರ್.ಸಿ.ಬಿ.ಗೆ ಸೋಲುಣಿಸಿ ಪ್ಲೇ ಆಫ್ ಪ್ರವೇಶಿಸಿದ ಮುಂಬೈ - Karavali Times ಆರ್.ಸಿ.ಬಿ.ಗೆ ಸೋಲುಣಿಸಿ ಪ್ಲೇ ಆಫ್ ಪ್ರವೇಶಿಸಿದ ಮುಂಬೈ - Karavali Times

728x90

28 October 2020

ಆರ್.ಸಿ.ಬಿ.ಗೆ ಸೋಲುಣಿಸಿ ಪ್ಲೇ ಆಫ್ ಪ್ರವೇಶಿಸಿದ ಮುಂಬೈ

 


ಅಬುಧಾಬಿ, ಅ. 29, 2020 (ಕರಾವಳಿ ಟೈಮ್ಸ್) : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್‍ಗಳಿಂದ ಭರ್ಜರಿಯಾಗಿ ಹಿಮ್ಮೆಟ್ಟಿಸುವ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಗಳನ್ನು ಸಂಪಾದಿಸಿ, ಅಗ್ರಸ್ಥಾನಿಯಾಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್ ತಂಡ ಡ್ರೀಮ್ ಇಲೆವನ್ ಐಪಿಎಲ್ ಕೂಟದ ಮೊದಲ ತಂಡವಗಿ ಪ್ಲೇ ಆಫ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿತು. 

ಬುಧವಾರ ರಾತ್ರಿ ಅಬುಧಾಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 165 ರನ್ ಸವಾಲು ಪಡೆದ ಪಡೆದ ಮುಂಬೈ 19.1 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಅರ್ಹ ಜಯ ಪಡೆಯಿತು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 18 ರನ್ (19 ಎಸೆತ, 1 ಸಿಕ್ಸರ್) ಇಶಾನ್ ಕಿಶನ್ 25 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 79 ರನ್ (43 ಎಸೆತ, 10 ಬೌಂಡರಿ, 3 ಸಿಕ್ಸರ್) ಅವರ ಭರ್ಜರಿ ಬ್ಯಾಂಟಿಂಗ್ ನೆರವಿನಿಂದ ಮುಂಬೈ ತಂಡ ಗೆಲುವು ಸಾದಿಸಿತು. 

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್‍ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಫಿಲಿಪ್ ಮತ್ತು ಪಡಿಕಲ್ ಮೊದಲ ವಿಕೆಟಿಗೆ 7.5 ಓವರ್‍ಗಳಲ್ಲಿ 71 ರನ್ ಭಾರಿಸಿದರು. ಫಿಲಿಪ್ 33 ರನ್ (24 ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರಿಸಿ ಸ್ಟಂಪ್ ಔಟಾದರು. 16.5 ಓವರ್‍ಗಳ ಕಾಲ ಕ್ರೀಸಿನಲ್ಲಿದ್ದ ಪಡಿಕಲ್ 74 ರನ್ (45 ಎಸೆತ, 12 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು.

131 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆರ್‍ಸಿಬಿ 7 ರನ್ ಗಳಿಸುವಷ್ಟರಲ್ಲಿ ಅಮೂಲ್ಯವಾದ 4 ವಿಕೆಟ್ ಕಳೆದುಕೊಂಡಿತು. ಎಬಿಡಿ, ಶಿವಂ ದುಬೆ, ಪಡಿಕಲ್ ಅವರನ್ನು ಬುಮ್ರಾ ಔಟ್ ಮಾಡಿದರೆ ಮೋರಿಸ್ ಅವರನ್ನು ಬೌಲ್ಟ್ ಪೆವಿಲಿಯನ್‍ಗೆ ಕಳುಹಿಸಿದರು. ಎಬಿಡಿ 15 ರನ್, ಗುರುಕೀರತ್ ಸಿಂಗ್ 10, ವಾಷಿಂಗ್ಟನ್ ಸುಂದರ್ 10 ರನ್ ಹೊಡೆದರು. ಬುಮ್ರಾ ತನ್ನ ಕೋಟಾದ 4 ಓವರ್‍ಗಳಲ್ಲಿ 1 ಸಹಿತ 14 ರನ್ ನೀಡಿ 3 ವಿಕೆಟ್ ಕಿತ್ತರು.







  • Blogger Comments
  • Facebook Comments

0 comments:

Post a Comment

Item Reviewed: ಆರ್.ಸಿ.ಬಿ.ಗೆ ಸೋಲುಣಿಸಿ ಪ್ಲೇ ಆಫ್ ಪ್ರವೇಶಿಸಿದ ಮುಂಬೈ Rating: 5 Reviewed By: karavali Times
Scroll to Top